ನವದೆಹಲಿ: ಅಮೆರಿಕದ ‘ಗ್ಲೋಬಲ್ ಫೈನಾನ್ಸ್’ ನಿಯತಕಾಲಿಕ ನೀಡುವ 2025ನೇ ಸಾಲಿನ ‘ಜಗತ್ತಿನ ಅತ್ಯುತ್ತಮ ಗ್ರಾಹಕ ಬ್ಯಾಂಕ್’ ಪ್ರಶಸ್ತಿಗೆ, ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಭಾಜನವಾಗಿದೆ.
ಅಕ್ಟೋಬರ್ 18ರಂದು ಅಮೆರಿಕದ ವಾಷಿಂಗ್ಟನ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಎಸ್‌ಬಿಐ ಅಧ್ಯಕ್ಷ ಸಿ.ಎಸ್. ಸೆಟ್ಟಿ ಅವರಿಗೆ ‘ಗ್ಲೋಬಲ್ ಫೈನಾನ್ಸ್’ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದೆ ಎಂದು ಬ್ಯಾಂಕ್ ಶುಕ್ರವಾರ ತಿಳಿಸಿದೆ.
‘ಗ್ರಾಹಕರ ಅನುಭವವು ಬ್ಯಾಂಕ್‌ನ ಬೆಳವಣಿಗೆಯ ಕಾರ್ಯತಂತ್ರದ ಕೇಂದ್ರ ಬಿಂದುವಾಗಿದೆ. ಈ ಜಾಗತಿಕ ಮನ್ನಣೆಯು ತನ್ನ ಸುಮಾರು 52 ಕೋಟಿ ಗ್ರಾಹಕರಿಗೆ ಸಲ್ಲುತ್ತದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ಸಿ.ಎಸ್.ಸೆಟ್ಟಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.