ADVERTISEMENT

ಜಾಗತಿಕ ತಂತ್ರಜ್ಞಾನದ ಕೇಂದ್ರ ಸ್ಥಾನದ ಮಾನ್ಯತೆ: ಬೆಂಗಳೂರಿಗೆ ನಾಲ್ಕನೇ ಸ್ಥಾನ

ಪಿಟಿಐ
Published 27 ಮೇ 2025, 16:06 IST
Last Updated 27 ಮೇ 2025, 16:06 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಬೆಂಗಳೂರಿನಲ್ಲಿರುವ ತಂತ್ರಜ್ಞಾನ ಕಂಪನಿಗಳಲ್ಲಿ ದುಡಿಯುತ್ತಿರುವ ಉದ್ಯೋಗಿಗಳ ಸಂಖ್ಯೆಯು 10 ಲಕ್ಷ ದಾಟಿದೆ. ಹಾಗಾಗಿ, ಜಾಗತಿಕ ಮಟ್ಟದ ಪ್ರಮುಖ 12 ತಂತ್ರಜ್ಞಾನ ಕೇಂದ್ರ ಸ್ಥಾನಗಳ (ಟೆಕ್ನಾಲಜಿ ಹಬ್‌) ಪಟ್ಟಿಯಲ್ಲಿ ಬೆಂಗಳೂರು ನಾಲ್ಕನೇ ಸ್ಥಾನ ಪಡೆದಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆಯಾದ ಸಿಬಿಆರ್‌ಇ ಮಂಗಳವಾರ ತಿಳಿಸಿದೆ.   

ಜಾಗತಿಕಮಟ್ಟದಲ್ಲಿ 115 ಪ್ರಮುಖ ತಂತ್ರಜ್ಞಾನ ಕೇಂದ್ರಗಳನ್ನು ಅಧ್ಯಯನ ನಡೆಸಿದ ‘ಗ್ಲೋಬಲ್‌ ಟೆಕ್‌ ಟ್ಯಾಲೆಂಟ್‌ ಗೈಡ್‌ಬುಕ್‌ 2025’ ಅನ್ನು ಸಿದ್ಧಪಡಿಸಲಾಗಿದೆ.

ತಂತ್ರಜ್ಞಾನದ ಲಭ್ಯತೆ, ಗುಣಮಟ್ಟ ಮತ್ತು ಕೌಶಲ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಆಧಾರದ ಮೇಲೆ ಈ ವರದಿ ರಚಿಸಲಾಗಿದೆ. ಬೀಜಿಂಗ್‌, ಬಾಸ್ಟನ್‌, ಲಂಡನ್‌, ನ್ಯೂಯಾರ್ಕ್‌, ಪ್ಯಾರಿಸ್‌, ಸ್ಯಾನ್‌ಫ್ರಾನ್ಸಿಸ್ಕೊ ಬೇ ಏರಿಯಾ, ಸಿಯಾಟಲ್‌, ಶಾಂಘೈ, ಸಿಂಗಪುರ, ಟೊಕಿಯೊ ಮತ್ತು ಟೊರೊಂಟೊ ಜಾಗತಿಕ ಪಟ್ಟಿಯಲ್ಲಿರುವ ಇತರೆ ನಗರಗಳಾಗಿವೆ‌.

ADVERTISEMENT

ಏಷ್ಯಾ–ಪೆಸಿಫಿಕ್‌ ಪ್ರದೇಶದಲ್ಲಿ ಬೆಂಗಳೂರು ಅತಿಹೆಚ್ಚು ತಂತ್ರಜ್ಞಾನ ಪ್ರತಿಭೆಗಳನ್ನು ಹೊಂದಿರುವ ಕೇಂದ್ರವಾಗಿ ಹೊರಹೊಮ್ಮಿದೆ. ಇದು ಬೆಂಗಳೂರನ್ನು ಜಾಗತಿಕಮಟ್ಟದಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯದ ಮುಂಚೂಣಿ ಸ್ಥಾನಕ್ಕೇರಲು ನೆರವಾಗಿದೆ ಎಂದು ತಿಳಿಸಿದೆ.

ದೆಹಲಿ, ಮುಂಬೈ, ಅಹಮದಾಬಾದ್, ಜೈಪುರ ಸಹ ಇದಕ್ಕೆ ಸಮಾನಾಂತರವಾಗಿ ಬೆಳೆಯುತ್ತಿದ್ದು, ದೇಶದ ತಂತ್ರಜ್ಞಾನ ವಲಯದ ಬೆಳವಣಿಗೆಗೆ ಕೊಡುಗೆ ನೀಡುತ್ತಿವೆ ಎಂದು ಹೇಳಿದ್ದಾರೆ.

ಸಾಂಕೇತಿಕ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.