ADVERTISEMENT

ಬಾಗಲಕೋಟೆ | ಪುಟ್ಟಿ ಬಂಡಿ ಓಟದ ಸ್ಪರ್ಧೆ: ರಾಮದುರ್ಗ ಎತ್ತುಗಳು ಪ್ರಥಮ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 3:02 IST
Last Updated 8 ಡಿಸೆಂಬರ್ 2025, 3:02 IST
ಶಿರೂರಿನಲ್ಲಿ ಭಾನುವಾರ ಪುಟ್ಟಿ ಬಂಡಿ ಓಟದ ಸ್ಪರ್ಧೆ ನಡೆಯಿತು
ಶಿರೂರಿನಲ್ಲಿ ಭಾನುವಾರ ಪುಟ್ಟಿ ಬಂಡಿ ಓಟದ ಸ್ಪರ್ಧೆ ನಡೆಯಿತು   

ಶಿರೂರ (ರಾಂಪುರ): ಬಾಗಲಕೋಟೆ ತಾಲ್ಲೂಕಿನ ಶಿರೂರ ಪಟ್ಟಣದಲ್ಲಿ ಭಾನುವಾರ ಜರುಗಿದ ಪುಟ್ಟಿಬಂಡಿ (ಕೂಡು ಬಂಡಿ) ಓಟದ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಗೋರೆಬಾಳದ ಶಂಕ್ರಪ್ಪ ಸವದತ್ತಿ ಅವರ ಎತ್ತುಗಳು ಪ್ರಥಮ ಬಹುಮಾನ ಪಡೆದುಕೊಂಡವು.

ಸಿದ್ಧೇಶ್ವರ ಜಾತ್ರೆ ಹಾಗೂ ಲಿಂ.ಸಿದ್ಧಲಿಂಗೇಶ್ವರ ಸ್ವಾಮೀಜಿ ಪುಣ್ಯಾರಾಧನೆ ಅಂಗವಾಗಿ ಸ್ಥಳೀಯ ಹಾದಿ ಬಸವೇಶ್ವರ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ 9 ಬಂಡಿಗಳು ಪಾಲ್ಗೊಂಡಿದ್ದವು.

ಹುನಗುಂದ ತಾಲ್ಲೂಕಿನ ಸೂಳೆಭಾವಿಯ ಪ್ರಕಾಶ ಕುರಿ ಅವರ ಎತ್ತು ದ್ವಿತೀಯ, ಮುದ್ದೇಬಿಹಾಳದ ನಬಿಲಾಲ ದೇಸಾಯಿ ಅವರ ಎತ್ತು ತೃತೀಯ ಹಾಗೂ ನರಗುಂದದ ಮಾರುತೇಶ್ವರ ಪ್ರಸನ್ ಎತ್ತುಗಳು ಚತುರ್ಥ ಬಹುಮಾನ ಗಳಿಸಿದವು.

ADVERTISEMENT

ಶಿವಯೋಗಾಶ್ರಮದ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಸಿದ್ದಪ್ಪ ಕೋಟಿಕಲ್, ರಂಗಪ್ಪ ಮಳ್ಳಿ, ಎಸ್.ಬಿ.ಮಾಚಾ, ಸಿದ್ದಪ್ಪ ಗಾಳಿ, ಸಿದ್ದಪ್ಪ ಹಂಡರಗಲ್, ರಾಮನಗೌಡ ಮಾಚಾ, ಹಣಮಂತ ಆಡಿನ, ಸುರೇಶ ರಾಜೂರ, ಮುತ್ತಪ್ಪ ಹಿರೇಕುಂಬಿ, ಸಿದ್ದಪ್ಪ ಮೇಳಿ, ವಿಷ್ಣು ಪೂಜಾರಿ, ಎಸ್. ಎಪ್.ಬಾರಡ್ಡಿ, ಎಚ್.ಎಸ್.ಗುಲಗಂಜಿ, ಶ್ರೀಶೈಲ ಮಲಘಾಣ, ಶಿವು ಕಾಮರಡ್ಡಿ, ಸಂಜಯ ನಡುವಿನಮನಿ ಇದ್ದರು.

ಶಿರೂರಿನಲ್ಲಿ ಭಾನುವಾರ ಪುಟ್ಟಿ ಬಂಡಿ ಓಟದ ಸ್ಪರ್ಧೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.