ADVERTISEMENT

ಸಾಹಿತಿ ಮಹಾದೇವ ಬಸರಕೋಡಗೆ ತೋಂಟದ ಸಿದ್ದಲಿಂಗಶ್ರೀ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 3:06 IST
Last Updated 14 ನವೆಂಬರ್ 2025, 3:06 IST
ಸಾಹಿತಿ ಮಹಾದೇವ ಬಸರಕೋಡ
ಸಾಹಿತಿ ಮಹಾದೇವ ಬಸರಕೋಡ   

ಅಮೀನಗಡ: ಪಟ್ಟಣದ ಸಾಹಿತಿ ಮಹಾದೇವ ಬಸರಕೋಡ ಅವರ 'ಸುರದೇನು'ಕೃತಿಗೆ ವಿಜಯಪುರದ ಕನ್ನಡ ಪುಸ್ತಕ ಪರಿಷತ್‌ ನೀಡುವ 'ಡಾ.ತೋಂಟದ ಸಿದ್ದಲಿಂಗ ಶ್ರೀ' ಪ್ರಶಸ್ತಿ ಲಭಿಸಿದೆ ಎಂದು ಪುಸ್ತಕ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶಂಕರ ಬೈಚಬಾಳ್ ತಿಳಿಸಿದ್ದಾರೆ.

ವಿಜಯಪುರದ ಪ್ರಗತಿ ಹೈಸ್ಕೂಲ್ ಆವರಣದಲ್ಲಿ ನ.19ರಂದು ನಡೆಯುವ ಕನ್ನಡ ಪುಸ್ತಕ ಸಮ್ಮೇಳನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಪ್ರಶಸ್ತಿಯು ₹10ಸಾವಿರ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪ್ರಮಾಣ ಪತ್ರ ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT