
ಪ್ರಜಾವಾಣಿ ವಾರ್ತೆ
ಕುಮಟಾ: ಬೈಕ್‌ನಲ್ಲಿ ದನದ ಮಾಂಸ ಹಾಗೂ ಹರಿತ ಆಯುಧಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ತಾಲ್ಲೂಕಿನ ಸಂತೆಗುಳಿ ಗ್ರಾಮದ ಹಿಂಡಬೈಲ್ ಬಳಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿತರಿಂದ 35 ಕೆ.ಜಿ. ದನದ ಮಾಂಸ ಹಾಗೂ ಕತ್ತಿ, ಚಾಕು ಮುಂತಾದ ಮಾರಕ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಸಂತೆಗುಳಿ ಗ್ರಾಮದ ಬಾಬು ಯಾನೆ ಆಶ್ರಫ್ ಜಕ್ರಿಯಾ ಖಾಜಿ, ಫಕೀರಸಾಬ್ ಜಮಾಲ್ ಸಾಬ್, ಗೌಸ್ ಅಬ್ದುಲ್ ರೆಹಮಾನ್ ಹಾಗೂ ಷರೀಫ್ ಸಾಬ್ ಎಂದು ಗುರುತಿಸಲಾಗಿದೆ.
ಹೊರಗಡೆ ಮೇಯಲು ಬಿಟ್ಟ ದನವನ್ನು ಭಾನುವಾರ ಹಿಡಿದು ವಧೆ ಮಾಡಿ ಆರೋಪಿ ಗೌಸ್ ಅಬ್ದುಲ್ ರೆಹಮಾನ್ ಅವರ ಮನೆಯ ಹತ್ತಿರ ಮಾಂಸ ಮಾಡಿ ಒಯ್ಯುತ್ತಿದ್ದ ಬಗ್ಗೆ ಶಿವರಾಜ ನಾಯ್ಕ ಎನ್ನುವವರು ದೂರಿದ್ದರು ಎಂದು ಪ್ರಕರಣ ದಾಖಲಿಸಿರುವ ಕುಮಟಾ ಪಿ.ಸ್.ಐ ಮಂಜುನಾಥ ಗೌಡರ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.