
ಮುಧೋಳ: ಹಿಂದಿನ ವರ್ಷಗಳ ಕಬ್ಬಿನ ಬಾಕಿ ಬಿಲ್ ಪಾವತಿಸಬೇಕು. ಪ್ರಸಕ್ತ ವರ್ಷ ಸರ್ಕಾರ ನಿಗದಿಪಡಿಸಿರುವ ಕಬ್ಬು ಬೆಳೆಗಾರರ ವಿರೋಧಿ ಬೆಲೆಯನ್ನು ನಾವು ಒಪ್ಪವುದಿಲ್ಲ. ನಮಗೆ ನ್ಯಾಯುತ ಬೆಲೆ ನೀಡಬೇಕು ಎಂದು ಆಗ್ರಹಿಸಿ ರೈತರು ಕರೆ ಕೊಟ್ಟಿದ್ದ ಮುಧೋಳ ಬಂದ್ ಗುರುವಾರ ಸಂಪೂರ್ಣ ಯಶಸ್ವಿಯಾಗಿದೆ. ಎಲ್ಲ ಅಂಗಡಿಗಳು ವಾಣಿಜ್ಯ ಚಟುವಟಿಕೆ ಸ್ಥಬ್ಧವಾಗಿತ್ತು. ವರ್ತಕರು ಸ್ವಯಂ ಪ್ರೇರಣೆಯಿಂದ್ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ನಗರದ ಸಂಗೊಳ್ಳಿ ರಾಯಣ್ಣ ಸರ್ಕಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ರೈತರು, ಟ್ರಾಕ್ಟರ್, ಅಟೋ, ಎತ್ತಿನ ಚಕ್ಕಡಿಗಳೊಂದಿಗೆ ಭವ್ಯ ಮೆರವಣಿಗೆಯನ್ನು ಸಂಗೋಳ್ಳಿ ರಾಯಣ್ಣ ಸರ್ಕಲದಿಂದ ಪ್ರಾರಂಭಿಸಿ ಜಡಗಣ್ಣ ಬಾಲಣ್ಣ ವೃತ್ತ, ಬರಗಿಮಸಿದಿ, ತಂಬಾಕ ಚೌಕ, ಗಾಂಧಿ ಸರ್ಕಲ್, ಶಾಹಿಮಸಿದಿ, ಶಿವಾಜಿ ಸರ್ಕಲ್, ಗಡದನ್ನವರ ಸರ್ಕಲಗೆ ಬಂದು ರಮೇಶ ಗಡದನ್ನವರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶಿವಾಜಿ ಸರ್ಕಲ್, ಅಂಬೇಡ್ಕರ್ ಸರ್ಕಲ್, ಬಸವೇಶ್ವರ ಸರ್ಕಲ್, ಜಡಗಣ್ಣ ಬಾಲಣ್ಣ ಸರ್ಕಲ್, ಮಾರ್ಗವಾಗಿ ಸಂಗೋಳ್ಳಿ ರಾಯಣ್ಣ ಸರ್ಕಲಗೆ ಬಂದು ಹಲವಾರು ಹೋರಾಟಗಾರರು ನ್ಯಾಯಯುತ ಬೇಡಿಕೆಗೆ ಆಗ್ರಹಿಸಿ ರೈತರು ಅನುಭವಿಸುತ್ತಿರುವ ಸಂಕಷ್ಟ, ಶೋಷಣೆ ಕುರಿತು ಮಾತನಾಡಿದರು.
ಬಸವಂತ ಕಾಂಬಳೆ, ದುಂಡಪ್ಪ ಯರಗಟ್ಟಿ, ಮಹೇಶಗೌಡ ಪಾಟೀಲ, ಹನಮಂತಗೌಡ ಪಾಟೀಲ, ಸುರೇಶ ಚಿಂಚಲಿ, ಸುರೇಶ ಡವಳೇಶ್ವರ, ರಾಚಪ್ಪ ಕಲ್ಲೋಳಿ, ಮುತ್ತಪ್ಪ ಕೊಮ್ಮಾರ, ಈರಪ್ಪ ಹಂಚಿನಾಳ,ಸುಭಾಸ ಶಿರಬೂರ, ಶ್ರೀಶೈಲಗೌಡ ಪಾಟೀಲ ಮುಂತಾದವರು ಭಾಗವಹಿಸಿದ್ದರು. ಸುವರು. ಅಲ್ಲದೆ ಸದರ ಪ್ರತಿಭಟನೆ ಮುಧೋಳ ನಗರದ ವ್ಯಾಪಾರಸ್ಥರು ಅಂಗಡಿಕಾರರು ಅಟೋ ಚಾಲಕರು ಬೆಂಬಲ ನೀಡಿದರು. ಅಲ್ಲದೆ ಬೆಳಗಾವಿ ಜಿಲ್ಲೆಯಿಂದ ರೈತರು ಸಹ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.