
ತೇರದಾಳ: ‘ಮಕ್ಕಳ ಭವಿಷ್ಯ ಉಜ್ವಲವಾಗಬೇಕೆಂದರೆ ಅಕ್ಷರಾಭ್ಯಾಸದ ಮೂಲಕ ನಮ್ಮ ಸಂಸ್ಕೃತಿಯ ಸ್ಪರ್ಶ ನೀಡಬೇಕಿದೆ’ ಎಂದು ಕಮರಿಮಠದ ಶರಣಬಸವದೇವರು ಹೇಳಿದರು.
ತಾಲ್ಲೂಕಿನ ಹಳಿಂಗಳಿ ಕಮರಿಮಠದ ಆಶ್ರಯದಲ್ಲಿ ನಡೆಯುವ ಶರಣಬಸವೇಶ್ವರ ಪ್ರಾಥಮಿಕ ಶಾಲಾ ಮಕ್ಕಳಿಗೆ ಶುಕ್ರವಾರ ಹಮ್ಮಿಕೊಂಡ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಪದ್ಧತಿ ನೆರವೇರಿಸಿ, ಅವರು ಆಶೀರ್ವಚನ ನೀಡಿದರು.
‘ಪಾಲಕರು ಮಕ್ಕಳ ಶೈಕ್ಷಣಿಕ ಚಟುವಟಿಕೆ ಸೇರಿದಂತೆ ಅವರ ಬೆಳವಣಿಗೆಯ ಮೇಲೂ ಸದಾ ನಿಗಾವಹಿಸಿ, ಅವರಿಗೆ ಉತ್ತಮ ಸಂಸ್ಕಾರ ರೂಢಿಸಬೇಕು’ ಎಂದರು.
ಇದೇ ಸಂದರ್ಭದಲ್ಲಿ ಪೀಠಾಧಿಪತಿ ಶಿವಾನಂದ ಶ್ರೀ ಮಕ್ಕಳಿಗೆ ಅಕ್ಷರ ಬರೆಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಾಲಕರು ದಂಪತಿಸಮೇತ ಬಿಳಿಧರಿಸಿನಲ್ಲಿ ಆಗಮಿಸಿ, ತಮ್ಮ ಮಕ್ಕಳ ಅಕ್ಷರಾಭ್ಯಾಸದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಮುಖ್ಯಗುರು ಸೋಮಶೇಖರ ಜಿ.ಎಸ್ ಸೇರಿದಂತೆ ಶಿಕ್ಷಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.