ಗುಳೇದಗುಡ್ಡ: ‘ತಾಲ್ಲೂಕಿನ ಎಲ್ಲ ಗ್ರಾಮಗಳ ಸಾರ್ವಜನಿಕರಿಗೆ ಉತ್ತಮವಾದ ಸೇವೆ ಒದಗಿಸುವ ಉದ್ದೇಶದಿಂದ ‘ಮನೆ ಮನೆಗೆ ಪೋಲಿಸ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಪಿಎಸ್ಐ ಸಿದ್ದಪ್ಪ ಎಡಹಳ್ಳಿ ಹೇಳಿದರು.
ತಾಲ್ಲೂಕಿನ ಇಂಜಿನವಾರಿ ಗ್ರಾಮದಲ್ಲಿ ಬುಧವಾರ ಮನೆ ಮನೆಗೂ ಭೇಟಿ ನೀಡಿ ಅಹವಾಲು ಸ್ವೀಕರಿಸಿದ ಅವರು, ಸೈಬರ್ ಅಪರಾಧ, ಮಾದಕ ವಸ್ತು, ಬಾಲ್ಯ ವಿವಾಹ, ಸಚಾರ ನಿಯಮ ಉಲ್ಲಂಘನೆ ಸಮಸ್ಯೆ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ಹೇಳಿದರು.
ಅಪರಾಧ ವಿಣಭಾಗದ ಪಿಎಸ್ಐ ಜೆ.ಪಿ. ಸಗರಿ, ಎಎಸ್ಐ ಎಂ.ಎಲ್. ಭಜಂತ್ರಿ, ಸಿಬ್ಬಂದಿ ಶರಣು ಕೂಡಲಪ್ಪನವರ, ಮಹಾದೇವ ಚಂದರಗಿ, ವಿಜಯ ತುಂಬದ, ಬೀರಪ್ಪ ಮಗಲನ್ನವರ, ಜಿ.ವಿ. ಮನ್ನಿಕಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.