ADVERTISEMENT

ಹೊಸಪೇಟೆ: ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಅಹ್ವಾನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 14:34 IST
Last Updated 9 ಜೂನ್ 2025, 14:34 IST
ಹೂವಿನಹಡಗಲಿ ತಾಲ್ಲೂಕು ಗುಜನೂರು ವಿದ್ಯುತ್ ಲೈನ್ ದುರಸ್ತಿಗೆ ಒತ್ತಾಯಿಸಿ ರೈತ ಸಂಘದ ಮುಖಂಡರು ಜೆಸ್ಕಾಂ ಅಧಿಕಾರಿಗೆ ಮನವಿ ಸಲ್ಲಿಸಿದರು.
ಹೂವಿನಹಡಗಲಿ ತಾಲ್ಲೂಕು ಗುಜನೂರು ವಿದ್ಯುತ್ ಲೈನ್ ದುರಸ್ತಿಗೆ ಒತ್ತಾಯಿಸಿ ರೈತ ಸಂಘದ ಮುಖಂಡರು ಜೆಸ್ಕಾಂ ಅಧಿಕಾರಿಗೆ ಮನವಿ ಸಲ್ಲಿಸಿದರು.   

ಹೊಸಪೇಟೆ: 2025-26ನೇ ಶೈಕ್ಷಣಿಕ ಸಾಲಿಗೆ ತಾಲ್ಲೂಕುಗಳಲ್ಲಿ ಖಾಲಿಯಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗ ತಲಾ 2 ರಂತೆ ವಿಶೇಷ ಸಂಪನ್ಮೂಲ ಶಿಕ್ಷಕರ (ಬಿಐಆರ್‌ಟಿ) ಒಟ್ಟು 20 ಹುದ್ದೆಗಳಿಗೆ ಅರ್ಹ ಶಿಕ್ಷಕರನ್ನು ನೇಮಿಸಿಕೊಳ್ಳಲು ನೇರಗುತ್ತಿಗೆಯಡಿ ತಾತ್ಕಾಲಿಕವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ  ಆಹ್ವಾನಿಸಲಾಗಿದೆ ಎಂದು ಡಿಡಿಪಿಐ ವೆಂಕಟೇಶ ರಾಮಚಂದ್ರಪ್ಪ ತಿಳಿಸಿದ್ದಾರೆ.

ಜೂನ್‌ 16ರೊಳಗಾಗಿ ಡಿಡಿಪಿಐ ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಶಿಕ್ಷಣ ಕರ್ನಾಟಕ, ಜಿಲ್ಲಾ ಶಾಲಾ ಶಿಕ್ಷಣಾ ಇಲಾಖೆ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಮಾಹಿತಿಗಾಗಿ ಜಿಲ್ಲಾ ಕಚೇರಿಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗುಜನೂರು ವಿದ್ಯುತ್ ಲೈನ್ ದುರಸ್ತಿಗೆ ಆಗ್ರಹ

ADVERTISEMENT

ಹೂವಿನಹಡಗಲಿ ತಾಲ್ಲೂಕಿನ ಶಿವಪುರ ವಿದ್ಯುತ್ ಲೈನ್‌ನಿಂದ ಗುಜನೂರು ಗ್ರಾಮಕ್ಕೆ ಸರಬರಾಜು ಆಗುವ 11 ಕೆವಿ ವಿದ್ಯುತ್ ಲೈನ್ ದುರಸ್ತಿಗೊಳಿಸಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸಂಘದ ಮುಖಂಡರು ಮನವಿ ಸಲ್ಲಿಸಿದ್ದಾರೆ. ಗುಜನೂರು ತಿಪ್ಪಾಪುರ ಗ್ರಾಮಗಳ ಕೃಷಿ ಪಂಪ್‌ಸೆಟ್‌ಗಳಿಗೆ ಶಿವಪುರ ಎಫ್-1 ಲೈನ್ ಮೂಲಕ ವಿದ್ಯುತ್ ಸರಬರಾಜು ಆಗುತ್ತಿದೆ. ಈ ಮಾರ್ಗದ ವಿದ್ಯುತ್ ಕಂಬ ಲೈನ್ ಶಿಥಿಲಗೊಂಡಿರುವುದರಿಂದ ಪದೇ ಪದೇ ವಿದ್ಯುತ್ ಕಡಿತದ ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ಒಂದು ವರ್ಷದಿಂದ ಜೆಸ್ಕಾಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ತಕ್ಷಣ ವಿದ್ಯುತ್ ಲೈನ್ ದುರಸ್ತಿಗೊಳಿಸಿ ಸಮಸ್ಯೆ ಬಗೆಹರಿಸಬೇಕು. ವಿಳಂಬ ಮಾಡಿದರೆ ಕಚೇರಿ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಗೋಣಿಬಸಪ್ಪ ತಾಲ್ಲೂಕು ಅಧ್ಯಕ್ಷ ಸಿದ್ದಪ್ಪ ಹೊಸಮನಿ ಪ್ರಧಾನ ಕಾರ್ಯದರ್ಶಿ ಎಂ.ಶಿವರಾಜ್ ಮೆಹಬೂಬ್ ಬಾಷ ಗಣೇಂದ್ರಪ್ಪ ರುದ್ರುಮಿನಿ ಸ್ವಾಮಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.