ADVERTISEMENT

ಹಗರಿಬೊಮ್ಮನಹಳ್ಳಿ: ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 14:35 IST
Last Updated 9 ಜೂನ್ 2025, 14:35 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಹಗರಿಬೊಮ್ಮನಹಳ್ಳಿ: ತಮಿಳುನಾಡಿನ ಸೇಲಂ ಜಿಲ್ಲೆಯ ವಾಲಪಾಡಿ ಬಳಿ ಶನಿವಾರ ನಡೆದ ಭಾರಿ ರಸ್ತೆ ಅಪಘಾತದಲ್ಲಿ ಪಟ್ಟಣದ ಮೂವರು ಮೃತಪಟ್ಟಿದ್ದರು.

ADVERTISEMENT

ಪಟ್ಟಣದ ವರ್ತಕರಾದ ರಾಣಾರಾಮ ಪಟೇಲ್ (52), ಜೋಗರಾಮ ಪಟೇಲ್ (62) ಮತ್ತು ಅವರ ಪತ್ನಿ ಸೋಗಿದೇವಿ ಜೋಗರಾಮ (55) ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಪಟ್ಟಣದಲ್ಲಿ ಸೋಮವಾರ ಅಂತ್ಯಕ್ರಿಯೆ ನೆರವೇರಿತು. ಮೃತರ ಮನೆಯ ಬಳಿ ನೆರೆದಿದ್ದ ನೂರಾರು ಜನ ಕಣ್ಣೀರಾದರು, ಮನೆಯವರ ರೋಧನೆ ಮುಗಿಲುಮುಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.