ADVERTISEMENT

ಕುರುಗೋಡು: ಮೆಚ್ಚುಗೆ ಪಡೆದ ಪರಿಸರ ಪ್ರೀತಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 13:37 IST
Last Updated 20 ಜೂನ್ 2025, 13:37 IST
ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದ ರಸ್ತೆಯ ಪಕ್ಕದಲ್ಲಿ ಬಿಡ ನಾಟಿ ಮಾಡುತ್ತಿರುವ ಹೂಗಾರ್ ಮಹೇಶ್ ಮತ್ತು ಸ್ನೇಹಿತರು
ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದ ರಸ್ತೆಯ ಪಕ್ಕದಲ್ಲಿ ಬಿಡ ನಾಟಿ ಮಾಡುತ್ತಿರುವ ಹೂಗಾರ್ ಮಹೇಶ್ ಮತ್ತು ಸ್ನೇಹಿತರು   

ಕುರುಗೋಡು: ಸಿರಿಗೇರಿ ಗ್ರಾಮದ ಯುವಕ ಹೂಗಾರ್ ಮಹೇಶ್ ಅವರು ಸರ್ಕಾರಿ ಕಚೇರಿ, ದೇವಸ್ಥಾನದ ಆವರಣ, ಶಾಲಾ ಕಾಲೇಜು, ರಸ್ತೆ ಬದಿಯಲ್ಲಿ ಪ್ರತಿವರ್ಷ 10 ಸಸಿಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ.

ಐದು ವರ್ಷಗಳಿಂದ ಬೆಳೆಸಿದ ಗಿಡಗಳು ಬೆಳೆದು ನೆರಳು ಕೊಡುತ್ತಿವೆ. ಇದು ಆರನೇ ವರ್ಷವಾಗಿದ್ದು ಸ್ವಂತ ಹಣದಲ್ಲಿ ಮೂವರು ಕಾರ್ಮಿಕರಿಗೆ ಕೂಲಿ ನೀಡಿ, ಖರೀದಿಸಿ ತಂದ ಸಸಿಗಳನ್ನು ನೆಟ್ಟು ಗಿಡಗಳ ರಕ್ಷಣೆಗೆ ತಂತಿ ಜಾಲಿ ಅಳವಡಿಸಿದ್ದಾರೆ.

ವೃತ್ತಿಯಲ್ಲಿ ಕಿರಾಣಿ ವರ್ತಕರಾಗಿರುವ ಹೂಗಾರ್ ಮಹೇಶ್ ಅವರ ಪರಿಸರ ಕಾಳಜಿಯ ಬಗ್ಗೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ನೇಹಿತರಾದ ರಾಘವೇಂದ್ರ ಮತ್ತು ಸುಬಾನ್ ಸಾಬ್ ಅವರಿಗೆ ಸಾಥ್ ನೀಡಿದ್ದಾರೆ.

ADVERTISEMENT

’ವಾಹನ ನಿಲ್ಲಿಸಲು ನೆರಳು ಹುಡುಕುವ ಜನರು ಗಿಡಮರ ಬೆಳೆಸುವ ಬಗ್ಗೆ ಚಿಂತಿಸುವುದಿಲ್ಲ. ಗಿಡಗಳನ್ನು ನೆಟ್ಟು ಪೋಷಿಸುವ ಕಾಯಕದಿಂದ ನನಗೆ ಖುಷಿತಂದಿದೆ’ ಎಂದು ಹೂಗಾರ್ ಮಹೇಶ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.