
ಸಿರುಗುಪ್ಪ: ಯೋಗ ಮತ್ತು ಪ್ರಾಣಾಯಾಮ ಆರೋಗ್ಯ ಪೂರ್ಣ ಜೀವನದ ಒಂದು ವೈಜ್ಞಾನಿಕ ವಿಧಾನ ಎಂಬುದನ್ನು ವೈದ್ಯಲೋಕ ಸಹ ಸ್ವೀಕರಿಸಿದೆ. ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ, ಆರೋಗ್ಯಯುತ ಜೀವನ ರೂಪಿಸಿಕೊಳ್ಳಲು ಯೋಗ ಒಂದು ಅತ್ಯುತ್ತಮ ವಿಧಾನವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗುರಪ್ಪ ಹೇಳಿದರು.
ನಗರದ ವಿಜಯಮೇರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.
ಯೋಗ ಶಿಕ್ಷಕಿ ಸಾವಿತ್ರಿ ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳನ್ನು ಮಾಡಿಸುವ ಮೂಲಕ ಅದರ ಉಪಯೋಗಗಳ ಮಾಹಿತಿ ನೀಡಿದರು.
ದೈಹಿಕ ಶಿಕ್ಷಣ ಪರೀವಿಕ್ಷಕ ಬಿ.ರಮೇಶ, ಬಿ.ಆರ್.ಪಿ. ಮಾರುತಿ, ಆಡಳಿತ ಮಂಡಳಿಯ ಮರೀಯಮ್ಮ, ಮುಖ್ಯ ಗುರುಗಳಾದ ಆರೋಗ್ಯ ಮೇರಿ, ಲೂರ್ದ ಮೇರಿ, ದೈಹಿಕ ಶಿಕ್ಷಕ ಉಪೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.