ADVERTISEMENT

ಕಂಪ್ಲಿ: ಬಸ್ ಡಿಪೊ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 15:08 IST
Last Updated 26 ಜನವರಿ 2025, 15:08 IST
ಕಂಪ್ಲಿ ತಾಲ್ಲೂಕು ದೇವಸಮುದ್ರ ಕ್ರಾಸ್ ಬಳಿಯ ಕಣವಿ ತಿಮ್ಮಲಾಪುರ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ 254ರ 5ಎಕರೆ ಭೂಮಿಯನ್ನು ಬಸ್ ಡಿಪೊನಿರ್ಮಿಸಲು ಶಾಸಕ ಜೆ.ಎನ್. ಗಣೇಶ್ ಶನಿವಾರ ಅಧಿಕಾರಿಗಳ ತಂಡದೊಂದಿಗೆ ಪರಿಶೀಲಿಸಿದರು
ಕಂಪ್ಲಿ ತಾಲ್ಲೂಕು ದೇವಸಮುದ್ರ ಕ್ರಾಸ್ ಬಳಿಯ ಕಣವಿ ತಿಮ್ಮಲಾಪುರ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ 254ರ 5ಎಕರೆ ಭೂಮಿಯನ್ನು ಬಸ್ ಡಿಪೊನಿರ್ಮಿಸಲು ಶಾಸಕ ಜೆ.ಎನ್. ಗಣೇಶ್ ಶನಿವಾರ ಅಧಿಕಾರಿಗಳ ತಂಡದೊಂದಿಗೆ ಪರಿಶೀಲಿಸಿದರು   

ಕಂಪ್ಲಿ: ತಾಲ್ಲೂಕಿನ ದೇವಸಮುದ್ರ ಕ್ರಾಸ್ ಬಳಿಯ ಕಣವಿ ತಿಮ್ಮಲಾಪುರ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ 254ರ 5 ಎಕರೆ ಭೂಮಿಯನ್ನು ಬಸ್ ಡಿಪೊ ನಿರ್ಮಿಸುವ ಸಲುವಾಗಿ ಶಾಸಕ ಜೆ.ಎನ್. ಗಣೇಶ್ ಶನಿವಾರ ಪರಿಶೀಲಿಸಿದರು.

ತಾಲ್ಲೂಕು ಕೇಂದ್ರವಾದ ಪಟ್ಟಣಕ್ಕೆ ಬಸ್ ಡಿಪೊ ತುಂಬಾ ಅಗತ್ಯವಿದೆ. ಕೆ.ಕೆ.ಆರ್.ಡಿ.ಬಿ ಇಲ್ಲವೆ ಜಿಲ್ಲಾ ಖನಿಜ ನಿಧಿಯಡಿ ಅನುದಾನ ಪಡೆಯಲು ಪ್ರಯತ್ನಿಸುವೆ. ಈ ನಿಟ್ಟಿನಲ್ಲಿ ಕೂಡಲೇ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿಕೊಡುವಂತೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಶಾಸಕ ಸೂಚಿಸಿದರು.

ಕುರುಗೋಡು ಡಿಪೊ ವ್ಯವಸ್ಥಾಪಕ ಚಂದ್ರಶೇಖರ್ ಮಾತನಾಡಿ, ಬಸ್ ಡಿಪೊ ನಿರ್ಮಾಣಕ್ಕೆ ಅಂದಾಜು ₹ 8 ಕೋಟಿ ಅಗತ್ಯವಿದೆ. ಇದರಲ್ಲಿ ಶೆಡ್, ಮ್ಯಾಕಾನಿಕಲ್ ವಿಭಾಗ, ಕಚೇರಿ ಕಟ್ಟಡ, ವಾಷಿಂಗ್, ಪೆಟ್ರೋಲ್ ಬಂಕ್ ಸೇರಿ ಅಗತ್ಯ ಕಟ್ಟಡ ನಿರ್ಮಿಸಬೇಕಾಗುತ್ತದೆ ಎಂದು ಶಾಸಕರಿಗೆ ಪ್ರಾಥಮಿಕ ಮಾಹಿತಿ ನೀಡಿದರು.

ADVERTISEMENT

ತಹಶೀಲ್ದಾರ್ ಎಸ್. ಶಿವರಾಜ, ಕಂದಾಯ ನಿರೀಕ್ಷಕ ವೈ.ಎಂ. ಜಗದೀಶ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ. ಷಣ್ಮುಖಪ್ಪ, ಮೆಟ್ರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನೇಣ್ಕಿ ಗಿರೀಶ್, ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.