ADVERTISEMENT

ಹೂವಿನಹಡಗಲಿಯಲ್ಲಿ ಯೋಗ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 14:42 IST
Last Updated 20 ಜೂನ್ 2025, 14:42 IST
ಹೂವಿನಹಡಗಲಿಯಲ್ಲಿ ಯೋಗ ಜಾಗೃತಿ ಜಾಥಾಕ್ಕೆ ಮುಖಂಡ ಕೋಡಿಹಳ್ಳಿ ಮುದುಕಪ್ಪ, ಡಾ. ಬಿ.ಶಿವಕುಮಾರ್ ಚಾಲನೆ ನೀಡಿದರು.
ಹೂವಿನಹಡಗಲಿಯಲ್ಲಿ ಯೋಗ ಜಾಗೃತಿ ಜಾಥಾಕ್ಕೆ ಮುಖಂಡ ಕೋಡಿಹಳ್ಳಿ ಮುದುಕಪ್ಪ, ಡಾ. ಬಿ.ಶಿವಕುಮಾರ್ ಚಾಲನೆ ನೀಡಿದರು.   

ಹೂವಿನಹಡಗಲಿ: ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್, ಸಾಂಖ್ಯ ಯೋಗ ಮತ್ತು ಸಂಗೀತ ಕೇಂದ್ರ, ಜೆಸಿಐ, ಗೃಹರಕ್ಷಕ ದಳ ಸಂಯುಕ್ತಾಶ್ರಯದಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಪಟ್ಟಣದಲ್ಲಿ ಶುಕ್ರವಾರ ಯೋಗ ಜಾಗೃತಿ ಜಾಥಾ ನಡೆಸಲಾಯಿತು.

ಮೈಲಾರಲಿಂಗೇಶ್ವರ ದೇವಸ್ಥಾನ ಬಳಿ ಮುಖಂಡ ಕೋಡಿಹಳ್ಳಿ ಮುದುಕಪ್ಪ, ಡಾ. ಬಿ. ಶಿವಕುಮಾರ್, ಪಿಎಸ್ಐ ವಿಂದ್ಯಾ ರಾಠೋಡ್ ಅವರು ಜಾಥಾಕ್ಕೆ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಯ ಮೂಲಕ ಸಾಗಿದ ಜಾಥಾ ಜಿಬಿಆರ್ ಕಾಲೇಜು ಆವರಣದಲ್ಲಿ ಸಂಪನ್ನಗೊಂಡಿತು.

ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ, ಎಚ್.ಲೋಕೇಶ, ಈಟಿ ಹನುಮೇಶ, ವಿನಾಯಕ ಕೋಡಿಹಳ್ಳಿ, ಗೃಹರಕ್ಷಕ ದಳದ ರಾಜಪೀರ್ ಇತರರು ಇದ್ದರು.

ADVERTISEMENT

‘ಯೋಗ ದಿನಾಚರಣೆ ಪ್ರಯುಕ್ತ 21 ರಂದು ಬೆಳಿಗ್ಗೆ 5.30 ರಿಂದ 7 ಗಂಟೆವರೆಗೆ ಸಾಮೂಹಿಕ ಯೋಗಾಭ್ಯಾಸ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಭಾಗವಹಿಸಬಹುದು’ ಎಂದು ಯೋಗ ತರಬೇತುದಾರ ಲೋಕೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.