
ಪ್ರಜಾವಾಣಿ ವಾರ್ತೆ
ಹೊಸಪೇಟೆ (ವಿಜಯನಗರ): ನಗರದ ತುಂಗಭದ್ರಾ ಎಲ್‍ಎಲ್‍ಸಿ ಕಾಲುವೆಯಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.
ನಗರದ ಚಿತ್ತವಾಡ್ಗಿಯ ವಿನೋಬಾ ಭಾವೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎ.ಎಂ.ಪಿ.ಶುಭಾ ಅವರ ಪುತ್ರ ಶಂಕರ್(17) ಮೃತಪಟ್ಟವರು.
ಶನಿವಾರ ಬೆಳಿಗ್ಗೆ ಸಂಬಂಧಿಕರೊಂದಿಗೆ ಚಿತ್ತವಾಡ್ಗಿ ಸಮೀಪದ ಕಾಲುವೆಯಲ್ಲಿ ಈಜಲು ತೆರಳಿದ ಸಂದರ್ಭದಲ್ಲಿ ನೀರು ಪಾಲಾಗಿದ್ದರು. ದಿನವಿಡೀ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಭಾನುವಾರ ಮಧ್ಯಾಹ್ನ ಎಚ್‍ಪಿಸಿ ಬಳಿ ಶಂಕರ್ ಶವವಾಗಿ ಪತ್ತೆಯಾಗಿದ್ದಾರೆ. ಈ ಕುರಿತು ನಗರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.