ADVERTISEMENT

ದೇವನಹಳ್ಳಿ| ವಿಮಾನ ನಿಲ್ದಾಣದಲ್ಲಿ ಕಲಾಲೋಕ ಮಳಿಗೆ ಉದ್ಘಾಟನೆ: ಚಿತ್ರ ಬಿಡಿಸಿದ CM

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 2:10 IST
Last Updated 12 ನವೆಂಬರ್ 2025, 2:10 IST
ದೇವನಹಳ್ಳಿ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಸ್ಥಾಪಿಸಿರುವ ಕಲಾಲೋಕ’ ಮಳಿಗೆಯನ್ನು ಸಂಕೇತಿಕವಾಗಿ ಚಿತ್ರಕಲೆಯನ್ನು ಬಿಡಿಸುವ ಮೂಲಕ ಗಂಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು.
ದೇವನಹಳ್ಳಿ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಸ್ಥಾಪಿಸಿರುವ ಕಲಾಲೋಕ’ ಮಳಿಗೆಯನ್ನು ಸಂಕೇತಿಕವಾಗಿ ಚಿತ್ರಕಲೆಯನ್ನು ಬಿಡಿಸುವ ಮೂಲಕ ಗಂಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು.   

ದೇವನಹಳ್ಳಿ: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–2ರಲ್ಲಿ ಸ್ಥಾಪಿಸಲಾದ ಆಕರ್ಷಕ ‘ಕಲಾಲೋಕ’ ಮಳಿಗೆಯನ್ನು ಮಂಗಳವಾರ ಸಂಕೇತಾತ್ಮಕ ಚಿತ್ರಕಲೆಯನ್ನು ರಚಿಸಿ, ಗಂಟೆ ಬಾರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು.

ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ' ಕರ್ನಾಟಕದ ಹೆಮ್ಮೆಪಡುವ ಹಾಗೂ ವಿಶಿಷ್ಟ ಜಿಐ ಪ್ರಮಾಣೀಕೃತ ಉತ್ಪನ್ನಗಳನ್ನು ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಪ್ರದರ್ಶಿಸಿ ಮಾರಾಟ ಮಾಡುವುದು ಈ ಮಳಿಗೆಯ ಉದ್ದೇಶವಾಗಿದೆ ಎಂದರು.

' ದೇಶದಲ್ಲಿ ಕೆಐಎ ವಿಮಾನ ನಿಲ್ದಾಣವೂ ಮೂರನೇ ಸ್ಥಾನದಲ್ಲಿದೆ. ಪ್ರತಿದಿನ ಹತ್ತು ಲಕ್ಷ ಪ್ರಯಾಣಿಕರು ಇಲ್ಲಿ ಆಗಮಿಸುತ್ತಾರೆ. ಈ ಕಲಾಲೋಕ ಅಂಗಡಿಯನ್ನು ರಾಜ್ಯದ ಸಂಸ್ಕೃತಿ ಮತ್ತು ಹೆಮ್ಮೆಯ ನೋಟವನ್ನು ಪ್ರಯಾಣಿಕರಿಗೆ ಆಗಮಿಸುವ ಕ್ಷಣದಲ್ಲೇ ತೋರಿಸಲು ಸ್ಥಾಪಿಸಲಾಗಿದೆ. ರಾಜ್ಯದ ವಿಶಿಷ್ಟ ಉತ್ಪನ್ನಗಳಿಗೆ ಜಾಗತಿಕ ಮಾನ್ಯತೆ, ಬ್ರಾಂಡಿಂಗ್ ಮತ್ತು ಮಾರುಕಟ್ಟೆ ತಲುಪುವಿಕೆ ಲಭ್ಯವಾಗುತ್ತದೆ ಎಂದರು.

ADVERTISEMENT

ಸಚಿವ ಎಂ.ಬಿ. ಪಾಟೀಲ್ ಹೇಳಿದರು, “ಟರ್ಮಿನಲ್–2 ಹತ್ತಿರ ಇರುವ ಕಲಾಲೋಕ ಅಂಗಡಿಯಲ್ಲಿ ಕರ್ನಾಟಕದ ಸಂಪ್ರದಾಯಿಕ ಉತ್ಪನ್ನಗಳಾದ ಮೈಸೂರು ಸ್ಯಾಂಡಲ್ ಸಾಬೂನು, ಸ್ಯಾಂಡಲ್‌ವುಡ್ ಎಣ್ಣೆ, ಧೂಪದ ಕಡ್ಡಿಗಳು, ಮೈಸೂರು ರೇಷ್ಮೆ, ಚನ್ನಪಟ್ಟಣ ಆಟಿಕೆಗಳು, ಲಿಡ್‌ಕಾರ್ ಚರ್ಮದ ವಸ್ತುಗಳು, ಸುಗಂಧ ಕಾಫಿ ಪುಡಿಗಳು ಮತ್ತು ಪಾನೀಯಗಳು, ಹಸ್ತಮಗ್ಗ ಉತ್ಪನ್ನಗಳು, ಇಲ್ಕಲ್ ಸೀರೆಗಳು, ಲಂಬಾಣಿ ವಸ್ತ್ರಗಳು, ಚಂದನದ ಕಲಾಕೃತಿಗಳು, ಬಿಡ್ರಿ ವಸ್ತುಗಳು ಮತ್ತು ಮೈಸೂರು ಶೈಲಿಯ ಚಿತ್ರಕಲೆಯಂತಹ ಉತ್ಪನ್ನಗಳು ಲಭ್ಯವಿರುತ್ತವೆ. ಒಟ್ಟು 45 ಜಿಐ ಪ್ರಮಾಣೀಕೃತ ಉತ್ಪನ್ನಗಳು ಇಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿರುತ್ತವೆ ಎಂದು ತಿಳಿಸಿದರು.

ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಇಂಧನ ಸಚಿವ ಕೆ.ಜೆ. ಜಾರ್ಜ್, ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಶರಣಬಸಪ್ಪ ದರ್ಶನಪುರ ಹಾಗೂ ಪ್ರಿಯಾಂಕ್ ಖರ್ಗೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.