
ಸತ್ತಿಗೇರಿ: ಸಮೀಪದ ಸೊಪ್ಪಡ್ಲ ಗ್ರಾಮದ ಲಕ್ಷ್ಮಿ ದೇವಸ್ಥಾನದಲ್ಲಿ ಗ್ರಾಮ ಪಂಚಾಯಿತಿ, ತಲ್ಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಯರಗಟ್ಟಿಯ ಇಂಟಿಗ್ರೇಟೆಡ್ ಕೌನ್ಸೆಲಿಂಗ್ ಆ್ಯಂಡ್ ಟೆಸ್ಟಿಂಗ್ ಸೆಂಟರ್ಸ್ ಹಾಗೂ ಸವದತ್ತಿಯ ಬರ್ಡ್ಸ್ ಸಂಸ್ಥೆ ಆಶ್ರಯದಲ್ಲಿ ನರೇಗಾ ಯೋಜನೆಯಡಿ ದುಡಿಯುವ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಯರಗಟ್ಟಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಎಸ್.ಬಳ್ಳೂರ, ‘ಹಲ್ಲುಗಳು ಗಟ್ಟಿಯಾಗಿ ಇರಬೇಕಾದರೆ, ಬಾಯಿ ಆರೋಗ್ಯ ಮುಖ್ಯ. ಇದರತ್ತ ಪ್ರತಿಯೊಬ್ಬರೂ ಗಮನಹರಿಸಬೇಕು’ ಎಂದರು.
ಯರಗಟ್ಟಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್.ಗಂಜಿ, ‘ಆಧುನಿಕ ಜೀವನಶೈಲಿ, ಜಂಕ್‌ಫುಡ್ ಸೇವನೆಯಿಂದ ಇಂದು ಜನರಿಗೆ ವಿವಿಧ ಕಾಯಿಲೆ ಬರುತ್ತಿವೆ. ಇವುಗಳ ನಿಯಂತ್ರಣಕ್ಕಾಗಿ ನಿಯಮಿತ ವ್ಯಾಯಾಮ ಅಗತ್ಯ’ ಎಂದು ಸಲಹೆ ನೀಡಿದರು.
ಮಹಾಂತೇಶ ಹಿರೇಮಠ, ಗ್ರಾ.ಪಂ ಸದಸ್ಯ ಕಿರಣ ಹುಣಶ್ಯಾಳ, ಕಾರ್ಯದರ್ಶಿ ಲಕ್ಷ್ಮಣ ಮಾದರ, ಗೀತಾ ಪೋಳ, ದೀಪಾ ಪಾಟೀಲ, ಶ್ರುತಿ ಕೊಟ್ರಶೆಟ್ಟಿ, ಆರ್.ಎಸ್.ಸನ್ನಿಂಗನ್ನವರ, ಎಂ.ಬಿ.ಚಿಲಕಂಡಿ, ಮಹಾಂತೇಶ ಕತ್ತಿ, ಪ್ರಕಾಶ ಮಾಂಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.