
ಜಾತ್ರೆ ಮತ್ತು ರಥೋತ್ಸವ
ಹುಕ್ಕೇರಿ: ತಾಲ್ಲೂಕಿನ ಕುರಣಿ ಗ್ರಾಮದ ಗಂಗಾದೇವಿ ಮಠದ ಜಾತ್ರೆ ಮತ್ತು ರಥೋತ್ಸವ ನ.5 ರಿಂದ 9ರ ವರೆಗೆ ವಿಜೃಂಭನೆಯಿಂದ ಜರುಗಲಿದೆ.
ನ.5ರಂದು ಪ್ರಾತಃಕಾಲ ಕಾರ್ತಿಕ ವದ್ಯೆ ಗೌರಿ ಹುಣ್ಣಿಮೆಯಂದು ಗಂಗಾದೇವಿ ಗದ್ದುಗೆಗೆ ಅಭಿಷೇಕ, ಮಧ್ಯಾಹ್ನ ಮಹಾಪ್ರಸಾದ ಮತ್ತು ಸಂಜೆ 5ಕ್ಕೆ ರಥದ ಕಳಸಾರೋಹಣ ನಂತರ ವೈದಿಕ ರತ್ನ ಸಿದ್ಧೇಶ್ವರ ಶಾಸ್ತ್ರಿ ನೇತೃತ್ವದಲ್ಲಿ ‘ಗಣಹೋಮ’ ನಡೆಯಲಿದೆ.
ನ.6ರಂದು ಬೆಳಿಗ್ಗೆ ಶಿವಭಜನೆ, 9ಕ್ಕೆ ಸಕಲ ವಾದ್ಯಮೇಳದೊಂದಿಗೆ ಪೂರ್ಣ ಕುಂಭೋತ್ಸವ ಮೂಲಕ ದೇವರನ್ನು ಕರೆತರುವುದು. ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಉದ್ಘಾಟಿಸುವರು. ನಂತರ ಮಹಾಪ್ರಸಾದವಿದೆ. ಸಂಜೆ 4ಕ್ಕೆ ‘ಟಗರಿನ ಕಾಳಗ’ ಕಾಳಗ ನಡೆಯಲಿದೆ.
ನ.7 ರಂದು ಬೆಳಿಗ್ಗೆ ಶಿವಭಜನೆ ಮತ್ತು 9ಕ್ಕೆ ಕುದುರೆ ಗಾಡಿ ಸ್ಪರ್ಧೆ ಇದೆ. ಮಧ್ಯಾಹ್ನ ಮಹಾಪ್ರಸಾದವಿದೆ. ಸಂಜೆ 4ಕ್ಕೆ ‘ಕುಸ್ತಿ’ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಪ್ರಥಮ ₹15,001, ದ್ವಿತೀಯ ₹11,001 ಮತ್ತು ತೃತೀಯ ₹7,001 ಬಹುಮಾನಗಳಿವೆ. ಅಂದು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ರಾತ್ರಿ 11ಕ್ಕೆ ‘ರಾಧಾಕೃಷ್ಣ’ ಬಯಲಾಟ ನಡೆಯಲಿದೆ.
ನ.8ರಂದು ಬೆಳಿಗ್ಗೆ 9ಕ್ಕೆ ಜೋಡೆತ್ತಿನ ಗಾಡಿ ಸ್ಪರ್ಧೆಯಿದೆ. ವಿಜೇತರಿಗೆ ಪ್ರಥಮ ಬಹುಮಾನ ₹51,001, ದ್ವಿತೀಯ ₹35,001 ಮತ್ತು ತೃತೀಯ ₹25,001 ಬಹುಮಾನಗಳಿವೆ. ಮಧ್ಯಾಹ್ನ ಮಹಾಪ್ರಸಾದವಿದೆ. ಮಧ್ಯಾಹ್ನ 4ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ‘ರಥೋತ್ಸವ’ ಉದ್ಘಾಟಿಸುವರು. ರಾತ್ರಿ 10ಕ್ಕೆ ಕುರಣಿ ಲಕ್ಷ್ಮೀದೇವಿ ನಾಟ್ಯ ಸಂಘದವರಿಂದ ‘ಅತ್ತಿಗೆಗೆ ಬಂದ ಅಗ್ನಿ ಪರೀಕ್ಷೆ’ (ಬೆಂಕಿಯಲ್ಲಿ ಅರಳಿದ ಹೂವು) ಸಾಮಾಜಿಕ ನಾಟಕವಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ಮೊ.8150984011, ಮೊ.9945859212, ಮೊ.8861073206 ಮತ್ತು 7899962219 ಸಂಪರ್ಕಿಸಬಹುದು. ನ.9ರಂದು ಬೆಳಿಗ್ಗೆ ದೇವಾನುದೇವತೆ ಬೀಳ್ಕೊಡುವ ಮೂಲಕ ಜಾತ್ರೆ ಸಂಪನ್ನಗೊಳ್ಳುವುದು ಎಂದು ಮಠದ ಟ್ರಸ್ಟಿ ಆನಂದ ಸ್ವಾಮಿ ತವಗಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.