ADVERTISEMENT

ಹಿರೇಬಾಗೇವಾಡಿ: ’ಶ್ರೀ ಸಾಯಿ ವೈದ್ಯರತ್ನ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 14:23 IST
Last Updated 1 ಜುಲೈ 2025, 14:23 IST
ಹಿರೇಬಾಗೇವಾಡಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವೈದ್ಯ ವಿಜಯ ದೇಸಾಯಿ ಅವರಿಗೆ ‘ಶ್ರೀ ಸಾಯಿ ವೈದ್ಯರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಹಿರೇಬಾಗೇವಾಡಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವೈದ್ಯ ವಿಜಯ ದೇಸಾಯಿ ಅವರಿಗೆ ‘ಶ್ರೀ ಸಾಯಿ ವೈದ್ಯರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಹಿರೇಬಾಗೇವಾಡಿ: ಇಲ್ಲಿನ ಸಾಯಿ ಮಂದಿರದಲ್ಲಿ, ಸಾಯಿ ಸೇವಾ ಸಮಿತಿ ಹಾಗೂ ಸೇವಾನಿರತ ವೈದ್ಯರ ಬಳಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಬೆಳಗಾವಿಯ ಪ್ರಭಾ ಆಸ್ಪತ್ರೆಯ ವೈದ್ಯ ವಿಜಯ ದೇಸಾಯಿ ಅವರಿಗೆ ‘ಶ್ರೀ ಸಾಯಿ ವೈದ್ಯರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸೇವಾ ಸಮಿತಿ ಅಧ್ಯಕ್ಷ ಡಾ. ಎಫ್.ಎಸ್. ಪಾಟೀಲ ಮಾತನಾಡಿ, ‘ಚಿಕಿತ್ಸೆಗೆ ಬರುವ ರೋಗಿಗಳನ್ನು ಪ್ರೀತಿಯಿಂದ ಕಾಣಬೇಕು. ವೈದ್ಯರು ಒಗ್ಗೂಡುವುದು ಅಗತ್ಯವುದೆ’ ಎಂದರು.

ಡಾ. ಸಮರ್ಥ ವನಹಳ್ಳಿ , ಡಾ. ಸೌಮ್ಯ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಜಪ್ತಿ , ಸಮಿತಿ ಸದಸ್ಯ ಶ್ರೀಕಾಂತ ಮಾಧುಬರಮಣ್ಣವರ, ಸಿ.ಸಿ. ಪಾಟೀಲ, ಶಿವಾನಂದ ಹಿತ್ತಲಮನಿ, ಮಂಜುನಾಥ ಕುಂಬಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.