
ಪ್ರಜಾವಾಣಿ ವಾರ್ತೆ
ಸಾವು
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಏರೋಸ್ಪೇಸ್ ಕಂಪನಿಯೊಂದರಲ್ಲಿ ಗುಣಮಟ್ಟದ ವಿಶ್ಲೇಷಣಾ ತಜ್ಞೆ ಆಗಿದ್ದ ನಂದಿನಿ (24) ಮೃತಪಟ್ಟಿದ್ದಾರೆ.
ರೇವಾ ವಿಶ್ವವಿದ್ಯಾಲಯದ ಬಳಿಯ ಪಿ.ಜಿ ಯಲ್ಲಿ ವಾಸವಿದ್ದರು. ಗುರುವಾರ ಕೆಲಸ ಮುಗಿಸಿ ಮನೆಗೆ ತೆರಳುವಾಗ ಬೂದಿಗೇರೆ ಕ್ರಾಸ್ ಬಳಿ ಸಂಜೆ ಅಪಘಾತ ಸಂಭವಿಸಿದೆ.
ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿ, ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಚಿಕ್ಕಜಾಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆಲಮಂಗಲದಲ್ಲಿ ನಂದಿನಿ ಅವರ ತಂದೆ–ತಾಯಿ ನೆಲಸಿದ್ದಾರೆ. ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.