ADVERTISEMENT

ಬೆಂಗಳೂರು| ಪಿಸ್ತೂಲ್ ಹಿಡಿದು ಜೊಮೆಟ್ರಿ ಪಬ್‌ಗೆ ನುಗ್ಗಿದ ಕಳ್ಳ: ಹಣ ದೋಚಿ‌ ಪರಾರಿ

​ಪ್ರಜಾವಾಣಿ ವಾರ್ತೆ
Published 12 ಮೇ 2025, 4:24 IST
Last Updated 12 ಮೇ 2025, 4:24 IST
   

ಬೆಂಗಳೂರು: ಮಲ್ಲೇಶ್ವರದ ಮಿಲ್ಕ್ ಕಾಲೊನಿಯ ಜೊಮೆಟ್ರಿ ಪಬ್‌ಗೆ ಪಿಸ್ತೂಲ್ ಹಿಡಿದು ಒಳ ನುಗ್ಗಿದ ಕಳ್ಳನೊಬ್ಬ, ಕ್ಯಾಶ್ ಕೌಂಟರ್ ಒಡೆದು ಹಣ ದೋಚಿ ಪರಾರಿ ಆಗಿದ್ದಾನೆ.

ಸಿಸಿಟಿವಿ ಕ್ಯಾಮೆರಾಗಳಿಗೆ ಹಾನಿ ಮಾಡಿ ಕಳ್ಳತನ ಮಾಡಿ ಪರಾರಿ ಆಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪಬ್‌ನ ಹಿಂದಿನ ಗೇಟ್‌ನಿಂದ ಪಿಸ್ತೂಲ್ ಹಿಡಿದು ಒಳ ನುಗ್ಗಿರುವುದನ್ನು ಗಮನಿಸಿದ್ದ ಪಬ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶಸ್ತ್ರ ಸಜ್ಜಿತರಾಗಿ ಸ್ಥಳಕ್ಕೆ ಬಂದಿದ್ದ ಪೊಲೀಸರು ಕಳ್ಳನಿಗೆ ಹುಡುಕಾಟ ನಡೆಸಿದ್ದರು‌. ಡ್ರೋನ್ ಸಹಾಯದಿಂದ ಕಳ್ಳ ಅವಿತು ಕುಳಿತಿದ್ದ ಸ್ಥಳದ ಪತ್ತೆ ಕಾರ್ಯ ನಡೆಸಿದ್ದರು.‌ ಅಷ್ಟರಲ್ಲಿ ಕಳ್ಳ ಕೃತ್ಯ ಎಸಗಿ ಪರಾರಿ ಆಗಿದ್ದಾನೆ.

ADVERTISEMENT

ಸುಬ್ರಮಣ್ಯಪುರ ಪೊಲೀಸರು ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅದಾವತ್ ಭೇಟಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.