
ಪ್ರಜಾವಾಣಿ ವಾರ್ತೆ
ಎಐ ಚಿತ್ರ
ಬೆಂಗಳೂರು: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯವು ಫೆ.22ರಂದು ಬೆಳಿಗ್ಗೆ 5ಕ್ಕೆ ನೀರಥಾನ್–26 ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುವ 9ನೇ ಆವೃತ್ತಿಯ ಕಾರ್ಯಕ್ರಮವನ್ನು ಅಲಯನ್ಸ್ ಇಂಡಸ್ಟ್ರೀಸ್, ವನ್ಯಜೀವಿ ಹಾಗೂ ಸಂರಕ್ಷಣಾ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ.
ಅಂದು ಬೆಳಿಗ್ಗೆ 5.30ರಿಂದ 5, 10 ಕಿ.ಮೀ, 5.50ಕ್ಕೆ 2 ಕಿ.ಮೀ ಓಟ ಪ್ರಾರಂಭವಾಗಲಿದೆ. ಲೇಕ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಆನಂದ ಮಲ್ಲಿಗವಾಡ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಅಲಯನ್ಸ್ ಹೌಸಿಂಗ್‌ನ ಆಸೀಮ್ ಜಾಹೀರ್ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಆಸಕ್ತರು neerathon.in ವೆಬ್‌ಸೈಟ್ ಮೂಲಕ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.