ಬೆಂಗಳೂರು: ರೈತರ ಅಗತ್ಯಗಳಿಗೆ ಪೂರಕವಾಗಿ ಹವಾಮಾನಕ್ಕೆ ಅನುಗುಣವಾಗಿ ಜೈವಿಕ ನಿಯಂತ್ರಕಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಭಾರತ ಸರ್ಕಾರದ ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ ದಳವಾಯಿ ತಿಳಿಸಿದರು.
ಐಸಿಎಆರ್–ಎನ್‌ಬಿಎಐಆರ್ ಯಲಹಂಕ ಕ್ಯಾಂಪಸ್‌ನಲ್ಲಿ ಶನಿವಾರ ನಡೆದ ‘ಬಯೋಕಂಟ್ರೋಲ್ ಎಕ್ಸ್‌ಪೋ’ 32ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಹವಾಮಾನ ಬದಲಾವಣೆಯ ಬಗೆಗಿನ ನಿಖರ ಸಂಶೋಧನೆ ಮಾಡಬೇಕು ಎಂದರು.
ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ಸದಸ್ಯ ಮೇಜರ್ ಸಿಂಗ್ ಮಾತನಾಡಿ, ‘ವೈರಸ್-ವೆಕ್ಟರ್ ಸಂಬಂಧಗಳ ಮೇಲೆ ತೀವ್ರವಾದ ಸಂಶೋಧನೆ ಅಗತ್ಯ’ ಎಂದು ಪ್ರತಿಪಾದಿಸಿದರು.
ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ ಕಾರ್ಯದರ್ಶಿ ಅರ್ಚನಾ ಸಿನ್ಹಾ ಅವರು ರಾಷ್ಟ್ರೀಯ ಮಟ್ಟದಲ್ಲಿ ಜೈವಿಕ ಕೀಟನಾಶಕಗಳ ನೋಂದಣಿಗೆ ಹೊಸದಾಗಿ ಸರಳೀಕೃತ ಮಾರ್ಗಸೂಚಿಗಳ ಕುರಿತು ಮಾತನಾಡಿದರು.
ಪ್ರಗತಿಪರ ರೈತರನ್ನು ಸನ್ಮಾನಿಸಿ, ಕೃಷಿ ಸಾಮಗ್ರಿ ವಿತರಿಸಲಾಯಿತು. ‘ತಾಯಿಯ ಹೆಸರಿನಲ್ಲಿ ಒಂದು ಮರ’ ಅಭಿಯಾನ ನಡೆಸಲಾಯಿತು.
ಐಸಿಎಆರ್-ಎನ್‌ಬಿಎಐಆರ್‌ನ ನಿರ್ದೇಶಕ ಎಸ್.ಎನ್. ಸುಶೀಲ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಕೃಷಿ ಯಂತ್ರೋಪಕರಣ ತಯಾರಕರ ಸಂಘದ (ಅಮ್ಮ) ಅಧ್ಯಕ್ಷ ಜ್ಞಾನೇಶ್ವರ ವಾಘಚೌರೆ, ವಿಜ್ಞಾನಿಗಳಾದ ಶ್ರೀದೇವಿ ಮತ್ತು ದೀಪಾ ಭಗತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.