
ಪ್ರಿಯಾಂಕ್ ಖರ್ಗೆ, ಮೋಹನದಾಸ್ ಪೈ
ಬೆಂಗಳೂರು: ಗೂಗಲ್‌ನ ಲಕ್ಷ ಕೋಟಿ ಹೂಡಿಕೆಯ ಎಐ ಹಬ್ ವಿಶಾಖಪಟ್ಟಣಕ್ಕೆ ಹೋಗಿದ್ದರ ಕುರಿತು ಐ.ಟಿ. ಉದ್ಯಮದ ಹಿರಿಯ ಮೋಹನದಾಸ್ ಪೈ ಅವರು ಕರ್ನಾಟಕದ ಐ.ಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿ ಟೀಕಿಸಿದ್ದಾರೆ.
ಹೂಡಿಕೆ ಮಾಡುತ್ತಾರೆಂದು ಅವರು ಕೇಳಿದ್ದೆಲ್ಲವನ್ನೂ ಕೊಡಲು ಆಗುವುದಿಲ್ಲ ಎಂಬ ಅರ್ಥದಲ್ಲಿ ಪ್ರಿಯಾಂಕ್ ಅವರು ಮಾತನಾಡಿರುವ ವಿಡಿಯೊ ತುಣಕನ್ನು ಹಂಚಿಕೊಂಡಿರುವ ಪೈ ಅವರು, ಗೂಗಲ್ ಅಂತಹ ದೊಡ್ಡ ಕಂಪನಿ ಸೃಷ್ಟಿಸುವ ಹೆಚ್ಚಿನ ಪಾವತಿಯ ಉದ್ಯೋಗಗಳಿಗೆ ಸ್ಥಳೀಯ ಸರ್ಕಾರಗಳು ನೀಡುವ ಸವಲತ್ತುಗಳು ಏನೂ ಅಲ್ಲ ಎಂದಿದ್ದಾರೆ.
ಕರ್ನಾಟಕದ ಸಚಿವರು ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ, ಜಾತಿ, ಜಾತಿ ಗಣತಿ, ತುಷ್ಟೀಕರಣದ ಹಿಂದೆ ಬಿದ್ದಿದ್ದಾರೆಯೇ ಹೊರತು, ಅಭಿವೃದ್ಧಿ, ಉದ್ಯೋಗ ಸೃಜನೆ, ತಂತ್ರಜ್ಞಾನದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಉಚಿತ ಯೋಜನೆಗಳಿಗೆ ಹಣ ಹೊಂದಿಸುವುದರಲ್ಲಿ ಮಗ್ನರಾಗಿ ಅವರು ಕರ್ನಾಟಕವನ್ನು ಹಿಂದಕ್ಕೆ ತಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.