
ದಾಬಾಸ್‌ಪೇಟೆ: ಸೋಂಪುರ ಹೋಬಳಿಯಾದ್ಯಂತ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಜನಜೀವನಕ್ಕೆ ತೊಂದರೆ ಉಂಟು ಮಾಡಿದೆ.
ವಾರದಿಂದ ಆಗಾಗ ಬರುತ್ತಿದ್ದ ಮಳೆ, ಸೋಮವಾರ ರಾತ್ರಿ 11 ಗಂಟೆಗೆ ಆರಂಭವಾಗಿ ಮಂಗಳವಾರ ರಾತ್ರಿಯವರೆಗೂ ಬಿಡದೆ ಸುರಿದಿದೆ. ಕೆಲವೊಮ್ಮೆ ಜೋರು, ಕೆಲವೊಮ್ಮೆ ಜಡಿ ಮಳೆ ಸುರಿದು ಭೂಮಿಯೆಲ್ಲಾ ತಂಪಾಗಿ ಕಾಲುವೆ ಮೂಲಕ ಹಳ್ಳ ಕೊಳ್ಳಗಳಿಗೆ ಒಂದಷ್ಟು ನೀರು ಹರಿದಿದೆ.
ದಾಬಸ್ ಪೇಟೆ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣ ಹಾಗೂ ಶಿವಗಂಗೆ ವೃತ್ತದಲ್ಲಿ ಮಳೆಯಿಂದ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟು ಮಾಡಿತ್ತು. ಮಳೆಯ ಪರಿಣಾಮ ರಾಗಿ ಹೊಲಗಳಲ್ಲಿ ನೀರು ತುಂಬಿದ್ದರೆ, ಕೆಲವೆಡೆ ರಾಗಿ ಪೈರು, ತೊಗರಿ ಗಿಡಗಳು ಮಳೆಯಿಂದ ನೆಲ ಕಚ್ಚಿವೆ.
ತೊಗರಿ, ಹಲಸಂದೆ, ರಾಗಿ ಪೈರುಗಳು ಹೂ ಬಿಟ್ಟಿದ್ದು, ಹೂ ಕಚ್ಚುವ ಹಂತದಲ್ಲಿ ಒಂದೇ ಸಮನೆ ಸುರಿದ ಮಳೆಯಿಂದ ಹೂ ಉದುರುವ, ಇಳುವರಿ ಕುಸಿಯುವ ಆತಂಕ ರೈತರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.