
ಬೆಂಗಳೂರು: ಕಂಚಿ ಕಾಮಕೋಟಿ ಪೀಠದ 70ನೇ ಪೀಠಾಧಿಪತಿ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಿದರು.
‘ಆಧ್ಯಾತ್ಮಿಕ ಜ್ಞಾನ, ಧ್ಯಾನ ಮತ್ತು ಶಾಂತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸಲು ಶ್ರೀ ಶ್ರೀ ರವಿಶಂಕರ್ ಅವರು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಅವರ ಸೇವಾ ಕಾರ್ಯ, ಭಾರತದ ಪ್ರಾಚೀನ ಜ್ಞಾನ ಪರಂಪರೆಯನ್ನು ಉಳಿಸುವಲ್ಲಿನ ಬದ್ಧತೆ ಮೆಚ್ಚುವಂಥದ್ದಾಗಿದೆ. ಆಧ್ಯಾತ್ಮಿಕ ಅಭ್ಯಾಸಗಳು ಎಲ್ಲರೂ ಅನುಸರಿಸುವಂತೆ ಸರಳ ಮತ್ತು ಪ್ರಸ್ತುತವಾಗಿಸಿದ್ದಾರೆ’ ಎಂದು ಕಂಚಿ ಸ್ವಾಮೀಜಿ ಶ್ಲಾಘಿಸಿದರು.
ಕಂಚಿ ಶ್ರೀಗಳನ್ನು ಶ್ರೀ ಶ್ರೀ ರವಿಶಂಕರ್ ಬರಮಾಡಿಕೊಂಡರು. ಆಶ್ರಮದ ಗುರುಕುಲ, ಗೋಶಾಲೆ ಮತ್ತು ವಿವಿಧ ಆಧ್ಯಾತ್ಮಿಕ ಕಲಿಕಾ ಕೇಂದ್ರಗಳಿಗೆ ಸ್ವಾಮೀಜಿ ಭೇಟಿ ನೀಡಿದರು. ವೇದ ಮಂತ್ರಗಳ ಪಠಣ, ಭಕ್ತಿ-ಗೌರವದಿಂದ ಪರಸ್ಪರ ಸನ್ಮಾನ ಹಾಗೂ ಭಾರತದ ಆಧ್ಯಾತ್ಮಿಕ ಪರಂಪರೆಯ ಮೌಲ್ಯಗಳನ್ನು ಶಾಶ್ವತವಾಗಿ ಸಂರಕ್ಷಿಸಿ ಬೆಳೆಸುವ ದೃಢ ಸಂಕಲ್ಪದೊಂದಿಗೆ ಸಮಾರಂಭವು ಮುಕ್ತಾಯಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.