
ಬೆಂಗಳೂರು: ಯುವಪ್ರತಿಭೆಗಳ ಕನಸು ನನಸುಗೊಳಿಸಲು ಬೇಕಾದ ಮಾರ್ಗದರ್ಶನ ಮತ್ತು ಸಂಪನ್ಮೂಲ ಒದಗಿಸಲು ಆಹ್ವಾನ ಫೌಂಡೇಷನ್ ‘ಲಕ್ಷ್ಯ’ ಎಂಬ ಹೊಸ ಯೋಜನೆಯನ್ನು ಗುರುವಾರ ಆರಂಭಿಸಿದೆ.
ಈ ಕಾರ್ಯಕ್ರಮದ ಮೂಲಕ ವರ್ಷಕ್ಕೆ 300ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಉದ್ದೇಶಿಸಿದೆ.
ಆರ್ಥಿಕ ಅಸಮಾನತೆ ಮತ್ತು ಗುಣಮಟ್ಟದ ಶಿಕ್ಷಣದ ಅಭಾವದಿಂದಾಗಿ ಅನೇಕ ಪ್ರತಿಭಾವಂತ ಮಕ್ಕಳಿಗೆ ನೈಜ ಸಾಮರ್ಥ್ಯವನ್ನು ತೋರಿಸಲು ಸಾಧ್ಯವಾಗುವುದಿಲ್ಲ. ಅವರ ಕನಸುಗಳಿಗೆ ಅವರ ಪರಿಸ್ಥಿತಿಯೇ ಅಡ್ಡಿಯಾಗುತ್ತಿದೆ. ಇದನ್ನು ಹೋಗಲಾಡಿಸಲು ‘ಲಕ್ಷ್ಯ’ ಜನ್ಮ ತಾಳಿದೆ ಎಂದು ಫೌಂಡೇಷನ್‌ನವರು ಮಾಹಿತಿ ನೀಡಿದ್ದಾರೆ.
ಆಹ್ವಾನ ಫೌಂಡೇಷನ್ ಸಂಸ್ಥಾಪಕ ಬೃಜ್‌ಕಿಶೋರ್ ಪ್ರಧಾನ್ ಮಾತನಾಡಿ, ‘ಪ್ರತಿಯೊ್ಬ್ಬರಿಗೂ ಸರಿಯಾದ ಮಾರ್ಗದರ್ಶನ, ಸಂಪನ್ಮೂಲ ಮತ್ತು ಬೆಂಬಲ ಒದಗಿಸಲು ಬದ್ಧರಾಗಿದ್ದೇವೆ’ ಎಂದು ತಿಳಿಸಿದರು.
ಶಾಸಕ ಉದಯ ಗರುಡಾಚಾರ್, ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ, ನಟ ಸುಚೇಂದ್ರ ಪ್ರಸಾದ್, ಡಿಸಿಪಿ ಮಂಜುನಾಥ್ ಬಾಬು, ಶಾಸ್ತ್ರಿ ಆಯುರ್ಧಾಮ ಆಸ್ಪತ್ರೆಯ ಮುಖ್ಯ ಸಲಹೆಗಾರ ಸಿ.ಎ. ಕಿಶೋರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.