
ಬೆಂಗಳೂರು: ನಗರದ ಬನಶಂಕರಿಯಲ್ಲಿ ‘ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್’ನ ಹೊಸ ಷೋ ರೂಂ ಆರಂಭವಾಗಿದೆ.
ಚಿನ್ನ ಮತ್ತು ವಜ್ರದ ವ್ಯಾಪಾರ ಸಮೂಹಗಳಲ್ಲಿ ದೇಶದಲ್ಲೇ ಅತಿ ದೊಡ್ಡದಾಗಿರುವ ‘ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್’ನ ಹೊಸ ಷೋ ರೂಂ ವಿಶ್ವದರ್ಜೆಯ ಆಭರಣಗಳನ್ನು ಹೊಂದಿದೆ.
ಬನಶಂಕರಿಯ 100 ಅಡಿ ರಸ್ತೆಯ, ಬಿಎಸ್‌ಕೆ ಮೂರನೇ ಹಂತದಲ್ಲಿರುವ ಅಪೊಲೊ ಪಬ್ಲಿಕ್ ಶಾಲೆಯ ಎದುರು ಆರಂಭಿಸಿರುವ ಈ ಹೊಸ ಷೋ ರೂಂ ಅನ್ನು ಕಂದಾಯ ಸಚಿವ ಆರ್. ಅಶೋಕ ಸೋಮವಾರ ಉದ್ಘಾಟಿಸಿದರು. ಕರ್ನಾಟಕ ವಿಭಾಗದ ಮುಖ್ಯಸ್ಥ ಫಿಲ್ಸೋರ್ ಬಾಬು, ವಲಯ ಮುಖ್ಯಸ್ಥರಾದ ಮಾನ್ಸೂರ್ ಅಲಂ ಮತ್ತು ರಿಬಿನ್ ತೌಫಿಕ್ ಇದ್ದರು.
ಇದು ಬೆಂಗಳೂರಿನ 12ನೇ ಮತ್ತು ಕರ್ನಾಟಕದಲ್ಲಿನ 28ನೇ ಷೋ ರೂಂ ಆಗಿದೆ. ಅಕ್ಷಯ ತೃತಿಯಕ್ಕಾಗಿ ಈ ಷೋ ರೂಂನಲ್ಲಿ ವಿಶೇಷ ಕೊಡುಗೆಗಳನ್ನು ಪ್ರಕಟಿಸಲಾಗಿದೆ. ವಜ್ರದ ಮೌಲ್ಯದ ಮೇಲೆ ಶೇ 20ರಷ್ಟು ಕಡಿತ ಹಾಗೂ ಎಲ್ಲ ರತ್ನಾಭರಣಗಳ ಮತ್ತು ‘ಅನ್‌ಕಟ್’ ಆಭರಣಗಳ ತಯಾರಿ ದರಗಳ ಮೇಲೆ ಶೇ 25ರಷ್ಟು ಕಡಿತದ ಸೌಲಭ್ಯವಿದೆ. ಹಲವಾರು ಆಕರ್ಷಕ ಮತ್ತು ಅಪರೂಪದ ಚಿನ್ನ ಮತ್ತು ವಜ್ರದ ಆಭರಣಗಳು ಇಲ್ಲಿ ಲಭ್ಯ. ತಯಾರಿಕಾ ಶುಲ್ಕವು ಶೇ 4.9ರಿಂದ ಆರಂಭವಾಗಲಿದೆ.
'ಬನಶಂಕರಿಯಲ್ಲಿ ಆರಂಭಿಸಿರುವ ಷೋ ರೂಂ ಗ್ರಾಹಕರಿಗೆ ಆಭರಣಗಳ ಖರೀದಿಯಲ್ಲಿ ಹೊಸತನ ನೀಡುತ್ತದೆ. ವಿಶ್ವದರ್ಜೆಯ ಶಾಪಿಂಗ್ ವ್ಯವಸ್ಥೆಯನ್ನು ಈ ಷೋ ರೂಂ ನೀಡುತ್ತದೆ. ಪ್ರತಿಯೊಂದು ಸಂದರ್ಭಕ್ಕೂ ಹೊಂದುವ ವಿನ್ಯಾಸಗಳು ಇಲ್ಲಿವೆ’ ಎಂದು ಮಲಬಾರ್ ಸಮೂಹದ ಅಧ್ಯಕ್ಷ ಎಂ.ಪಿ. ಅಹಮ್ಮದ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.