ADVERTISEMENT

ಮೆಟ್ರೊ: ಬೆಳಿಗ್ಗೆ 5ರಿಂದ 7ರವರೆಗೆ ಕೆಲವೆಡೆ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 14:25 IST
Last Updated 9 ಆಗಸ್ಟ್ 2023, 14:25 IST
   

ಬೆಂಗಳೂರು: ಮೆಟ್ರೊ ನೇರಳೆ ಮಾರ್ಗದಲ್ಲಿ ವಿಸ್ತರಿತ ಸಂಚಾರದ ಕಾಮಗಾರಿಗಳಿಗಾಗಿ ಆ.10, 11 ಮತ್ತು 14ರಂದು ಬೆಳಿಗ್ಗೆ ಕೆಲವು ನಿಲ್ದಾಣಗಳಲ್ಲಿ ಮೆಟ್ರೊ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.

ಬೈಯಪ್ಪನಹಳ್ಳಿ ಟರ್ಮಿನಲ್‌ನಿಂದ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೊ ನಿಲ್ದಾಣ, ಕೃಷ್ಣರಾಜಪುರ, ವೈಟ್‌ಫೀಲ್ಡ್‌ವರೆಗೆ ಮೆಟ್ರೊ ಸಂಚಾರ ವಿಸ್ತರಿತ ಮಾರ್ಗದಲ್ಲಿ ಸಿಗ್ನಲಿಂಗ್‌ ಮತ್ತು ಇತರ ಕಾಮಗಾರಿಗಳು ನಡೆಯಲಿವೆ. ಬೈಯಪ್ಪನಹಳ್ಳಿವರೆಗೆ ಎಂದಿನಂತೆ ಮೆಟ್ರೊ ರೈಲುಗಳು ಸಂಚರಿಸಲಿದ್ದು, ಅಲ್ಲಿಂದ ಮುಂದಕ್ಕೆ ವೈಟ್‌ಫೀಲ್ಡ್‌ವರೆಗೆ ಬೆಳಿಗ್ಗೆ 7 ಗಂಟೆಯವರೆಗೆ ಸಂಚಾರ ಇರುವುದಿಲ್ಲ. 

ಕೆಂಗೇರಿ ನಿಲ್ದಾಣದಿಂದ ಚಲ್ಲಘಟ್ಟವರೆಗೆ ಸಿಗ್ನಲಿಂಗ್‌ ಮತ್ತು ಇತರ ಕಾಮಗಾರಿಗಳನ್ನು ಆ.14ರಂದು ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳಿಗ್ಗೆ 5ರಿಂದ  7ರವರೆಗೆ ಕೆಂಗೇರಿ–ವಿಜಯನಗರ ನಿಲ್ದಾಣಗಳ ನಡುವೆ ಮೆಟ್ರೊ ರೈಲು ಸಂಚಾರ ಸ್ಥಗಿತಗೊಳ್ಳಲಿದೆ. 

ADVERTISEMENT

ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.