ADVERTISEMENT

‘ಪರಿಸರ ದಿನ’ಕ್ಕೆ ನೀರೆರೆದ ವರುಣ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 19:51 IST
Last Updated 5 ಜೂನ್ 2019, 19:51 IST
ಓಕಳಿಪುರದ ರಸ್ತೆಯಲ್ಲಿ ಮಳೆನೀರಲ್ಲೇ ವಾಹನ ಸವಾರರು ಸಾಗಿದರು –ಪ್ರಜಾವಾಣಿ ಚಿತ್ರ
ಓಕಳಿಪುರದ ರಸ್ತೆಯಲ್ಲಿ ಮಳೆನೀರಲ್ಲೇ ವಾಹನ ಸವಾರರು ಸಾಗಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದಲ್ಲಿ ನೆಡಲಾಗಿದ್ದ ಸಸಿಗಳಿಗೆಬುಧವಾರ ಸಂಜೆ ಗುಡುಗು ಸಹಿತ ಸುರಿದ ಮಳೆ ನೀರೆರೆಯಿತು.

ಚಿಕ್ಕಜಾಲ,ಸರ್ಜಾಪುರ,ಯಲಹಂಕ,ಬಂಡಿಕೊಡಿಗೇಹಳ್ಳಿ,ಪಟ್ಟಾಭಿರಾಮನಗರ,ಪೀಣ್ಯ ಕೈಗಾರಿಕಾ ಪ್ರದೇಶ,ದೊಡ್ಡಬಿದರಕಲ್ಲು, ಬೆಳ್ಳಂದೂರು, ಮಹದೇವಪುರ,ಬೊಮ್ಮನಹಳ್ಳಿ, ಆನೇಕಲ್‌, ಜಿಗಣಿ, ಸುತ್ತಮುತ್ತ ಸುಮಾರು ಒಂದೂವರೆ ಗಂಟೆ ಮಳೆ ಆರ್ಭಟಿಸಿತು.

ನಗರದಲ್ಲಿ ಸರಾಸರಿ 13.45 ಮಿ.ಮೀ ಮಳೆಯಾಗಿದೆ. ಯಲಹಂಕ ಉಪನಗರ, ರಾಜರಾಜೇಶ್ವರಿನಗರದ ಐಡಿಯಲ್‌ ಹೋಂ ಬಡಾವಣೆ, ಮಲ್ಲತ್ತಹಳ್ಳಿ, ಬೆಳ್ಳಂದೂರು, ಟ್ರಿನಿಟಿ ರಸ್ತೆ, ವಿಲ್ಸನ್‌ ಗಾರ್ಡನ್‌, ಮಾತೃ ಬಡಾವಣೆಗಳಲ್ಲಿ ಮರಗಳು ನೆಲಕ್ಕುರುಳಿದವು. ಏಳು ಕಡೆಗಳಲ್ಲಿ ಮರದ ಕೊಂಬೆಗಳು ಬಿದ್ದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.

ADVERTISEMENT

ಜೋರು ಮಳೆಯಿಂದಾಗಿ ಶಾಂತಿನಗರ, ಅರೆಕೆರೆ, ಬಿಳೇಕಹಳ್ಳಿ, ಸಂಪಂಗಿರಾಮನಗರ, ಸುಧಾಮನಗರ, ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ರಸ್ತೆಯ ಮೇಲೆ ನೀರು ಹೊಳೆಯಂತೆ ಹರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.