ADVERTISEMENT

ಸ್ಮಾರ್ಟ್‌ ಕಾರ್ಡ್‌ ಯೋಜನೆ ಕೈ ಬಿಡಿ– ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 20:29 IST
Last Updated 20 ಫೆಬ್ರುವರಿ 2026, 20:29 IST
   

ಬೆಂಗಳೂರು: ‘ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆಯನ್ನು ಸ್ಮಾರ್ಟ್‌ ಕಾರ್ಡ್‌ ಹೆಸರಿನಲ್ಲಿ ದುರ್ಬಲಗೊಳಿಸುವ ಪ್ರಯತ್ನ ಕೈಬಿಡಿ’ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯ ಸಮಿತಿ ಆಗ್ರಹಿಸಿದೆ.

‘ಆಧಾರ್‌ ಕಾರ್ಡ್ ತೋರಿಸಿ ರಾಜ್ಯದ ಪ್ರಜೆ ಎಂದು ಖಾತ್ರಿಪಡಿಸಿದರೆ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಸಂಚರಿಸಬಹುದು ಎನ್ನುವ ನಿಯಮವಿದೆ. ಆದರೆ, ರಾಜ್ಯ ಸರ್ಕಾರ ತರಲು ಹೊರಟಿರುವ ಸ್ಮಾರ್ಟ್‌ ಕಾರ್ಡ್‌ ಮೂಲಕ ಪ್ರಯಾಣಿಸುವವರ ಸಮುದಾಯಗಳ ವಿವರ ಪಡೆಯುವ ಪ್ರಯತ್ನವೂ ಒಳ್ಳೆಯದಲ್ಲ. ಈಗ ಇರುವಂತೆಯೇ ಯೋಜನೆ ಇದ್ದರೆ ಸಾಕು’ ಎಂದು ಸಮಿತಿಯ ರಾಜ್ಯ ಕಾರ್ಯದರ್ಶಿ ಎಸ್.ಶೋಭಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT