
ಬೆಂಗಳೂರು: ವೈಯಾಲಿಕಾವಲ್‌ನಲ್ಲಿ ನಡೆದಿದ್ದ ಮಹಾಲಕ್ಷ್ಮಿ ಅವರ ಕೊಲೆ ಪ್ರಕರಣದ ಆರೋಪಿ ಮುಕ್ತಿ ರಂಜನ್ ರಾಯ್ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಬರೆದಿದ್ದಾರೆ ಎನ್ನಲಾದ ಮರಣಪತ್ರವು ಒಡಿಶಾದ ಧುಸುರಿ ಪೊಲೀಸರಿಗೆ ಸಿಕ್ಕಿದೆ. ಆ ಪತ್ರವನ್ನು ಬೆಂಗಳೂರು ನಗರ ಪೊಲೀಸರಿಗೆ ಧುಸುರಿ ಪೊಲೀಸರು ಹಸ್ತಾಂತರಿಸಿದ್ದಾರೆ.
ಆರೋಪಿ ಬಂಧನಕ್ಕಾಗಿ ಮೂರು ವಿಶೇಷ ಪೊಲೀಸ್ ತಂಡಗಳು ಬೆಂಗಳೂರಿನಿಂದ ಒಡಿಶಾಕ್ಕೆ ತೆರಳಿದ್ದವು.
‘ಸೆ.3ರಂದು ಮಹಾಲಕ್ಷ್ಮಿ ಮನೆಗೆ ತೆರಳಿದ್ದೆ. ಆಗ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಆಗ ಆಕೆಯೇ ನನ್ನ ಮೇಲೆ ಹಲ್ಲೆ ನಡೆಸಿದ್ದಳು. ಇದರಿಂದ ಕೋಪಗೊಂಡು, ಪ್ರತಿಯಾಗಿ ಹಲ್ಲೆ ನಡೆಸಿ ಕೊಲೆ ಮಾಡಿದೆ. ದೇಹವನ್ನು 59 ತುಂಡುಗಳಾಗಿ ಕತ್ತರಿಸಿ ಫ್ರಿಜ್‌ನಲ್ಲಿ ಇರಿಸಿದ್ದೆ. ಹಲವು ದಿನಗಳಿಂದ ಇಬ್ಬರೂ ಆತ್ಮೀಯರಾಗಿದ್ದರೂ ಸಣ್ಣ ವಿಚಾರಕ್ಕೂ ಅವರುಳು ಮುನಿಸಿಕೊಳ್ಳುತ್ತಿದ್ದಳು. ಅವಳ ವರ್ತನೆಯಿಂದ ಬೇಸತ್ತು ಕೃತ್ಯ ಎಸಗಿದ್ದೇನೆ ಎಂಬುದಾಗಿ ಮರಣಪತ್ರದಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳದಲ್ಲಿ ಲ್ಯಾಪ್‌ಟಾಪ್ ದೊರೆತಿಲ್ಲ. ಒಂದು ಬ್ಯಾಗ್ ಮತ್ತು ಸ್ಕೂಟರ್ ಇತ್ತು. ಬ್ಯಾಗ್, ಬ್ಯಾಗ್‌ನಲ್ಲಿದ್ದ ದಾಖಲೆಗಳು ಹಾಗೂ ಮರಣಪತ್ರವನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.