ADVERTISEMENT

ಬೆಂಗಳೂರು: ಕೊನೆಯ ಮೂರು ದಿನ ‘ದಿ ಇಂಡಿಯನ್ ಆರ್ಟಿಸಾನ್ಸ್ ಹಾಟ್’ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 14:59 IST
Last Updated 16 ಅಕ್ಟೋಬರ್ 2025, 14:59 IST
<div class="paragraphs"><p>ರಂಗೋಲಿ ಮೆಟ್ರೊ ಆರ್ಟ್ ಸೆಂಟರ್‌ನಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್ ಆಯೋಜಿಸಿರುವ ‘ಇಂಡಿಯನ್ ಆರ್ಟಿಸಾನ್ಸ್ ಹಾಟ್’ ಪ್ರದರ್ಶನದಲ್ಲಿ ಜನರು ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು</p></div>

ರಂಗೋಲಿ ಮೆಟ್ರೊ ಆರ್ಟ್ ಸೆಂಟರ್‌ನಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್ ಆಯೋಜಿಸಿರುವ ‘ಇಂಡಿಯನ್ ಆರ್ಟಿಸಾನ್ಸ್ ಹಾಟ್’ ಪ್ರದರ್ಶನದಲ್ಲಿ ಜನರು ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೊ ಆರ್ಟ್ ಸೆಂಟರ್‌ನಲ್ಲಿ ‘ದಿ ಇಂಡಿಯನ್ ಆರ್ಟಿಸಾನ್ಸ್ ಹಾಟ್’ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇನ್ನು ಮೂರು ದಿನ ಮಾತ್ರ ಇರಲಿದೆ. ಗ್ರಾಹಕರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಆಯೋಜಕರು ತಿಳಿಸಿದ್ದಾರೆ.

ADVERTISEMENT

ದೀಪಾವಳಿ ಪ್ರಯುಕ್ತ ಆಯೋಜಿಸಿರುವ ಈ ಪ್ರದರ್ಶನ ಅ.19ರವರೆಗೆ ಇರಲಿದೆ. ಕೈಮಗ್ಗ, ಹಸ್ತಶಿಲ್ಪ ಮತ್ತು ಪರಂಪರಾತ್ಮಕ ಕಲೆಗಳನ್ನು ಈ ಪ್ರದರ್ಶನದಲ್ಲಿ ಪ್ರಸ್ತುತಪಡಿಸಲಾಗಿದೆ. ದೇಶದ ವಿವಿಧ ಭಾಗಗಳ ಕಲಾವಿದರು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ತಾವು ತಯಾರಿಸಿದ ಕಲಾತ್ಮಕ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.

ಚನ್ನಪಟ್ಟಣದ ಆಟಿಕೆಗಳು, ಉತ್ತರ ಪ್ರದೇಶದ ಖುರ್ಜಾದ ಮಣ್ಣಿನ ಪಾತ್ರೆ ಹಾಗೂ ಆಲಂಕಾರಿಕ ವಸ್ತುಗಳು, ಒಡಿಶಾದ ಡೋಕ್ರಾ ಕಲೆ ಹಾಗೂ ಮರದ ಆಟಿಕೆಗಳು, ವರ್ಣಚಿತ್ರಗಳು, ಆಭರಣಗಳು, ಮನೆ ಆಲಂಕಾರಿಕ ವಸ್ತುಗಳು ಸೇರಿದಂತೆ ಹಲವು ವೈವಿಧ್ಯ ಸಾಂಪ್ರದಾಯಿಕ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿವೆ.

ತಮಿಳುನಾಡು, ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಸೇರಿ ದೇಶದ ವಿವಿಧ ರಾಜ್ಯಗಳ ಕಲಾವಿದರು ತಾವು ತಯಾರಿಸಿದ ಉತ್ಪನ್ನಗಳನ್ನು ತಂದಿದ್ದಾರೆ. ವಿವಿಧ ಬಗೆಯ ಸೀರೆಗಳು, ಪಿಠೋಪಕರಣ, ಬ್ಯಾಗ್‌ಗಳು, ಖಾದಿ ಬಟ್ಟೆಗಳೂ ದೊರೆಯುತ್ತವೆ ಎಂದು ಆಯೋಜಕರು ತಿಳಿಸಿದ್ದಾರೆ.

‘ಇಂಡಿಯನ್ ಆರ್ಟಿಸಾನ್ಸ್ ಹಾಟ್’ ಪ್ರದರ್ಶನದಲ್ಲಿ ಕಲಾಕೃತಿಗಳನ್ನು ವೀಕ್ಷಿಸಿದ ಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.