
ಬಸವಕಲ್ಯಾಣ: ಭಾರತೀಯ ವೀರ ಯೋಧರು ಪಾಕಿಸ್ತಾನದಲ್ಲಿ ನಡೆಸುತ್ತಿರುವ ಸಿಂಧೂರ ಕಾರ್ಯಾಚರಣೆಗೆ ಯಶಸ್ಸು ಬಯಸಿ ನಗರದ ಬಸವಣ್ಣನವರ ಪರುಷಕಟ್ಟೆಯಲ್ಲಿ ಶುಕ್ರವಾರ ಬಿಜೆಪಿ ನಗರ ಘಟಕದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಘಟಕದ ಅಧ್ಯಕ್ಷ ಸಿದ್ದು ಬಿರಾದಾರ ಮಾತನಾಡಿ, `ಆತಂಕವಾದಿಗಳು ಹಲವಾರು ಜನರ ಹತ್ಯೆ ನಡೆಸಿ ಮಹಿಳೆಯರ ಕುಂಕುಮ ಅಳಿಸಿದ್ದರಿಂದ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಈ ಕಾರ್ಯದಲ್ಲಿ ಭಾರತೀಯ ಸೈನಿಕರಿಗೆ ಜಯವಾಗಲಿ ಎಂದು ಬಸವಣ್ಣನವರು ಮತ್ತು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದರು.
ಮುಖಂಡ ಕೃಷ್ಣಾ ಗೋಣೆ ಮಾತನಾಡಿ, `ಸಮಸ್ತ ಭಾರತವೇ ಯೋಧರ ಹಿಂದಿದೆ. ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಣಯಕ್ಕೆ ಸರ್ವರೂ ಬೆಂಬಲಿಸಬೇಕಾಗಿದೆ' ಎಂದರು.
ಪ್ರಮುಖರಾದ ಪ್ರದೀಪ ಬೇಂದ್ರೆ, ಶಿವರಾಜ ಮೆಂಗದೆ, ರಾಜಕುಮಾರ ಅಲಶೆಟ್ಟಿ, ಬಾಬುರಾವ್ ಹಿಂಶೆ, ಸಂಜೀವ ಶಾಶೆಟ್ಟೆ, ವೆಂಕಟೇಶ ಖರಟಮಲ್, ವಿಶ್ವನಾಥ ಚಿರಡೆ, ಕವಿತಾ ಸಜ್ಜನ್, ಸುರೇಖಾ ಅನ್ವಳೆ, ವಿಜಯಲಕ್ಷ್ಮಿ ಚವಾಣ, ಸಾಗರ ಮೇತ್ರೆ, ಸಂತೋಷ ಮದನಸೂರೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.