ADVERTISEMENT

ಅಫಜಲಪುರ: ಸಾಲಬಾಧೆಯಿಂದ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 15:39 IST
Last Updated 15 ಜೂನ್ 2025, 15:39 IST
ಭೀರಣ್ಣ ಪಾಟೀಲ
ಭೀರಣ್ಣ ಪಾಟೀಲ   

ಅಫಜಲಪುರ: ತಾಲ್ಲೂಕಿನ ದಿಕ್ಸಂಗಾ (ಕೆ) ಗ್ರಾಮದ ರೈತ ಬೀರಣ್ಣ ಪಾಟೀಲ (50) ಸಾಲಬಾಧೆಗೆ ಬೇಸತ್ತು ಭಾನುವಾರ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ರೈತನಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀರಣ್ಣ ಗ್ರಾಮದಲ್ಲಿ 4.8 ಎಕರೆ ಜಮೀನು ಹೊಂದಿದ್ದು, ಮಾಶ್ಯಾಳ ಗ್ರಾಮದ ಬ್ಯಾಂಕ್‌ನಲ್ಲಿ ₹ 4.71 ಲಕ್ಷ ಹಾಗೂ ಖಾಸಗಿಯಾಗಿ ₹ 6 ಲಕ್ಷ ಸಾಲ ಮಾಡಿದ್ದರು. ಸಾಲಕ್ಕೆ ಹೆದರಿ ಮನೆಯಲ್ಲಿ ವಿಷ ಸೇವಿಸಿದ್ದಾರೆ. ಕೂಡಲೇ ಸ್ಥಳೀಯರ ಸಹಾಯದಿಂದ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ADVERTISEMENT

‘ಸಾಲಬಾಧೆಯಿಂದ ರೈತರ ಆತ್ಮಹತ್ಯೆ ಹೆಚ್ಚಳವಾಗುತ್ತಿದ್ದು, ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು’ ಎಂದು ತಾಲ್ಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಶ್ರೀಮಂತ ಬಿರಾದಾರ, ಕಾರ್ಯದರ್ಶಿ ಗುರು ಚಾಂದಕೋಟೆ ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.