
ಪ್ರಜಾವಾಣಿ ವಾರ್ತೆ
ಹುಮನಾಬಾದ್ (ಬೀದರ್ ಜಿಲ್ಲೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ವಿಠಲ್ ಸೇಡಂಕರ್ ಅವರನ್ನು ಬೀದರ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಅವರು ಅಮಾನತುಗೊಳಿಸಿದ್ದಾರೆ.
ವಿಠಲ್ ಸೇಡಂಕರ್ ಅವರು ಕಚೇರಿ ಅವಧಿಯಲ್ಲಿ ಸರ್ಕಾರದ ನಿಯಮ ಪಾಲಿಸಿಲ್ಲ. ಕೇಂದ್ರ ಸ್ಥಾನಕ್ಕೆ ನಿಗದಿತ ಅವಧಿಯಲ್ಲಿ ಹಾಜರಾಗಿಲ್ಲ. ವಸತಿ ನಿಲಯಗಳ ಪ್ರವಾಸದ ಅವಧಿಯಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಇದ್ದರೂ ಹಾಜರಾತಿ ಹಾಕಿಲ್ಲ. ವಸತಿ ನಿಲಯಗಳ ನಿರ್ವಹಣೆ ಬಿಲ್‌ಗಳು, ಸಿಂಧುತ್ವಕ್ಕೆ ಹಣವಿಲ್ಲದೆ ಕೆಲಸ ಮಾಡುತ್ತಿಲ್ಲ ಎಂದು ದ್ರಾವಿಡ ಕ್ರಾಂತಿ ಯುವ ಸೇನೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ ಅಮಾನತು ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.