ADVERTISEMENT

‘ದಿ ರೂಲರ್ಸ್’ ಸಾಮಾಜಿಕ ಸಂದೇಶ ಸಾರುವ ಚಿತ್ರ: ಸಾಹಿತಿ ಕೆ.ಎಂ.ಸಂದೇಶ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 15:55 IST
Last Updated 10 ಸೆಪ್ಟೆಂಬರ್ 2024, 15:55 IST
ಭಾಲ್ಕಿಯ ಸಂಗಮೇಶ ಚಿತ್ರಮಂದಿರದಲ್ಲಿ ವಿವಿಧ ಸಂಘಟನೆಗಳಿಂದ ಆಯೋಜಿಸಿದ್ದ ದಿ ರೂಲರ್ಸ್ ಚಲನಚಿತ್ರ ವೀಕ್ಷಣಾ ಸಮಾರಂಭದಲ್ಲಿ ಚಿತ್ರನಟ ಸಾಹಿತಿ ಕೆ.ಎಂ.ಸಂದೇಶ ಕೋಲಾರ ಮಾತನಾಡಿದರು
ಭಾಲ್ಕಿಯ ಸಂಗಮೇಶ ಚಿತ್ರಮಂದಿರದಲ್ಲಿ ವಿವಿಧ ಸಂಘಟನೆಗಳಿಂದ ಆಯೋಜಿಸಿದ್ದ ದಿ ರೂಲರ್ಸ್ ಚಲನಚಿತ್ರ ವೀಕ್ಷಣಾ ಸಮಾರಂಭದಲ್ಲಿ ಚಿತ್ರನಟ ಸಾಹಿತಿ ಕೆ.ಎಂ.ಸಂದೇಶ ಕೋಲಾರ ಮಾತನಾಡಿದರು   

ಭಾಲ್ಕಿ: ’ದಿ ರೂಲರ್ಸ್’ ಚಲನಚಿತ್ರ ಸಾಮಾಜಿಕ ಸಂದೇಶ ಸಾರುವ ಚಿತ್ರ ಎಂದು ಚಿತ್ರನಟ, ಸಾಹಿತಿ ಕೆ.ಎಂ.ಸಂದೇಶ ಕೋಲಾರ ಹೇಳಿದರು.

ಪಟ್ಟಣದ ಸಂಗಮೇಶ ಚಿತ್ರಮಂದಿರದಲ್ಲಿ ಮಂಗಳವಾರ ವಿವಿಧ ಸಂಘಟನೆಗಳಿಂದ ಆಯೋಜಿಸಿದ್ದ ಅಶ್ವಥ್ ಬೆಳಕೆರೆ ನಿರ್ಮಾಣದ ‘ದಿ ರೂಲರ್ಸ್’ ಚಲನಚಿತ್ರ ವೀಕ್ಷಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ವಿದ್ಯಾರ್ಥಿಗಳು ಪ್ರೀತಿ, ಪ್ರೇಮಕ್ಕೆ ಬಲಿಯಾಗದೇ ಓದಿಗೆ ಹೆಚ್ಚಿನ ಮಹತ್ವ ನೀಡಬೇಕು ಎನ್ನುವ ಸಂದೇಶ ಇದರಲ್ಲಿದೆ‘ ಎಂದರು.

ADVERTISEMENT

ಕನ್ನಡಪರ ಸಂಘಟನೆಯ ಜೈರಾಜ ಕೊಳ್ಳಾ, ದಲಿತಪರ ಸಂಘಟನೆಯ ಒಕ್ಕೂಟದ ವಿಲಾಸ ಮೋರೆ, ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಪ್ರಮುಖರಾದ ಅಶೋಕ ಗಾಯಕವಾಡ, ಸುಧಾಕರ ಕಿಸ್ಕಿಂದಾ, ದತ್ತಾತ್ರಿ ಜ್ಯೋತಿ, ಮಾರುತಿ ಭಾವಿಕಟ್ಟೆ, ಸಂಜುಕುಮಾರ ಭಾವಿಕಟ್ಟೆ, ಜೈಪಾಲ ಬೋರಾಳೆ, ಶಿವಕುಮಾರ ಮೇತ್ರೆ, ಪ್ರವೀಣ ಮೇತ್ರೆ, ಮನ್ಮಥ ಸ್ವಾಮಿ ಕಾಕನಾಳ, ಸತೀಶ ಕಲಾ, ದಿಲೀಪ ಶೇರಿಕಾರ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.