
ಪ್ರಜಾವಾಣಿ ವಾರ್ತೆ
ಭಾಲ್ಕಿ: ಪಟ್ಟಣದ ಪುರಸಭೆಯ ಮುಂಭಾಗದಲ್ಲಿ ಪೌರಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಕಾರ್ಮಿಕರ ಮುಷ್ಕರದಿಂದ ಕಸ ವಿಲೇವಾರಿ, ಚರಂಡಿ ಸ್ವಚ್ಛಗೊಳಿಸುವಿಕೆ ಸೇರಿದಂತೆ ಎಲ್ಲ ಕೆಲಸ ಸ್ಥಗಿತಗೊಂಡಿರುವುದರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಸ ಎಲ್ಲ ಕಡೆ ಹರಿದಾಡುತ್ತಿದೆ. ಮೇಲಿಂದ ಮೇಲೆ ಮಳೆ ಸುರಿಯುತ್ತಿರುವುದರಿಂದ ಕೆಲವು ಕಡೆ ಕಸ ಸಂಗ್ರಹಣೆಯಿಂದ ಗಬ್ಬು ವಾಸನೆ ಬರುತ್ತಿದೆ. ಇದರಿಂದ ವಿವಿಧ ಕಾಯಿಲೆ ಹರಡುವ ಭಯ ಜನರನ್ನು ಕಾಡುತ್ತಿದೆ.
‘ನಾವು ಈ ಹಿಂದೆ ಮುಷ್ಕರ ನಡೆಸಿದರೂ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ಹಾಗಾಗಿ, ರಾಜ್ಯದಾದ್ಯಂತ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುತ್ತಿದೆ. ನಮ್ಮ ನ್ಯಾಯಸಮ್ಮತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ನೀರು ಪೂರೈಕೆ ಸೇವೆ ಸಹ ಸ್ಥಗಿತಗೊಳಿಸಲಾಗುವುದು’ ಎಂದು ಪೌರ ಕಾರ್ಮಿಕ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅವಿನಾಶ ಗಾಯಕವಾಡ ಎಚ್ಚರಿಸಿದರು.
ಈ ವೇಳೆ ಪ್ರಮುಖರಾದ ಪ್ರದೀಪ ಢಗೆ, ಸಂತೋಷ, ವಿಶ್ವನಾಥ, ಬಾಲಾಜಿ ಕಂದಾಯ, ಸುಶೀಲ ಕುಮಾರ, ವಿಜಯಕುಮಾರ ಬನಸೊಡೆ, ಉದಯಕುಮಾರ, ನಾಗರಾಜ, ಸಿದ್ಧು, ನಾರಾಯಣ, ಪ್ರಕಾಶ, ವಿದ್ಯಾವತಿ, ಶ್ರೀದೇವಿ, ಸಂತೋಷ ಪಾಂಚಾಳ, ಧನಾಜಿ ಸೂರ್ಯವಂಶಿ, ದಸ್ತಗಿರ, ಜಯಶ್ರೀ, ಶಕುಂತಲಾ, ಚಂದ್ರಕಲಾ, ಮಂಗಲಾಬಾಯಿ, ಉತ್ತಮಬಾಯಿ ಸೇರಿ ಅನೇಕರು ಇದ್ದರು.
Quote - ಪಟ್ಟಣದ ಸೌಂದರ್ಯ ವೃದ್ಧಿಗಾಗಿ ಶ್ರಮಿಸುವ ಪೌರ ಕಾರ್ಮಿಕರ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ಮೂಲಕ ಮುಷ್ಕರ ಹಿಂತೆಗೆದುಕೊಳ್ಳಲು ಮನವೊಲಿಸಬೇಕು ಸೋಮನಾಥಪ್ಪ ಅಷ್ಟೂರೆ ಸರಾಫ್ ಬಜಾರ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.