ಕೊಳ್ಳೇಗಾಲ: ಭೀಮ ನಗರದ ದಿಡ್ಡದ ಕೇರಿ ಬಡಾವಣೆಯಲ್ಲಿ ಬುಧವಾರ ಸಂಜೆ ಮನೆ ಮಂದಿ ಹೊರಹೋಗಿದ್ದ ಸಂದರ್ಭ ಕಳ್ಳರು ನುಗ್ಗಿದ ಬಗ್ಗೆ ದೂರು ದಾಖಲಾಗಿದೆ.
ಬಡಾವಣೆಯ ನಿವಾಸಿ ರಾಜಮ್ಮ ಹಾಗೂ ಅವರ ಮಗಳು ಕೆಲಸಕ್ಕೆ ಹೋಗಿದ್ದ ವೇಳೆ ಎಂಬವರ ಮನೆಗೆ ಕಳ್ಳರು ನುಗ್ಗಿ ಕೃತ್ಯ ನಡೆಸಿದ್ದರು. ‘ ಮನೆಗೆ ವಾಪಸ್ ಬಂದು ನೋಡಿದಾಗ ಬಾಗಿಲ ಬೀಗ ಒಡೆದು ಒಳಗೆ ಪ್ರವೇಶ ಮಾಡಿ, ಕೊಠಡಿಯ ಬೀರುವನ್ನು ಒಡೆದು ಹಾಕಿದ್ದರು. ಚಿನ್ನಾಭರಣ ಇರುವುದನ್ನು ಗಮನಿಸಿಲ್ಲ. ಕೊನೆಗೆ ಹಾಸಿಗೆಯ ಮೇಲೆ ಇದ್ದ ಮೊಬೈಲ್ ಫೋನ್ ಸಹಿತ ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಸಿಪಿಐ ಶಿವಮಾದಯ್ಯ , ಸಿಬ್ಬಂದಿಪರಿಶೀಲನೆ ನಡೆಸಿದರು. ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.