
ಕೊಳ್ಳೇಗಾಲ: ಮಂಟೇಸ್ವಾಮಿ ಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರವನ್ನು ತ್ವರಿತವಾಗಿ ಅನುಷ್ಠಾನ ಗೊಳಿಸಬೇಕು ಎಂದು ಒತ್ತಾಯಿಸಿ ಸಾಹಿತ್ಯ ಮಿತ್ರಕೂಟದ ಪದಾಧಿಕಾರಿಗಳು ಸರ್ಕಾರಕ್ಕೆ ಬುಧವಾರ ಮನವಿ ಪತ್ರವನ್ನು ಸಲ್ಲಿಸಿದರು.
ನಗರದ ತಾಲ್ಲೂಕು ಕಚೇರಿಗೆ ತೆರಳಿದ ಸಾಹಿತ್ಯ ಮಿತ್ರಕೂಟದವರು ತಹಶೀಲ್ದಾರ್ ಕುಮಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಅಧ್ಯಕ್ಷ ಬಾಳಗುಣಸೆ ಮಂಜುನಾಥ್ ಮಾತನಾಡಿ, ಮಂಟೇಸ್ವಾಮಿ ನೀಲಗಾರ ಪರಂಪರೆ ಮತ್ತು ಜನಪದ ಕಾವ್ಯವು ಜಿಲ್ಲೆಯಷ್ಟೇ ಅಲ್ಲ, ಕನ್ನಡ ಸಂಸ್ಕೃತಿ ಮತ್ತು ವಿಶ್ವ ಜಾನಪದ ಲೋಕಕ್ಕೂ ಹೆಮ್ಮೆಯಾಗಿದ್ದು, 12ನೇ ಶತಮಾನ ಶರಣರ ವಚನ ಚಳವಳಿಯ ಮುಂದುವರಿದ ಭಾಗವಾಗಿದೆ. ಸಮಾನತೆಯ ಸಮಾಜ ನಿರ್ಮಾಣದ ಉದ್ದೇಶ ಹೊಂದಿದೆ. ಸಂಪುಟ ನಿರ್ಣಯದಂತೆ ಚಿಕ್ಕಲ್ಲೂರು ಸಿದ್ದಪ್ಪಾಜಿ ಮತ್ತು ಕುರುಬನಕಟ್ಟೆ ಲಿಂಗಯ್ಯ ಚನ್ನಯ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯ ತ್ವರಿತವಾಗಿ ಪ್ರಾರಂಭವಾಗ ಬೇಕು ಎಂದು ಒತ್ತಾಯಿಸಿದರು.
ಮಿತ್ರಕೂಟದ ಪ್ರೊ.ದೊಡ್ಡಲಿಂಗೇಗೌಡ, ಸಾಹಿತಿ ಶಂಕನಪುರ ಮಹದೇವ, ಶಂಭುಲಿಂಗಸ್ವಾಮಿ, ಚನ್ನಮಾದೇಗೌಡ, ರಾಮಯ್ಯ, ರಾಚಪ್ಪಾಜಿ, ಲೋಕೇಶ್, ಶಿವಣ್ಣ, ಸುಂದರೇಶ್, ಅರುಣ್, ಕಾತ್ಯಾಯಿನಿ, ಸುಂದರಣ್ಣ, ಕುಮಾರಸ್ವಾಮಿ, ರಿಯಾಜ್ ಅಲಿ, ಗೋಪಾಲನಾಯಕ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.