ADVERTISEMENT

ಬಡತನ, ಅಸಮಾನತೆ ನಿರ್ನಾಮವಾಗಲಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 5:47 IST
Last Updated 7 ಡಿಸೆಂಬರ್ 2025, 5:47 IST
ಬಾಗೇಪಲ್ಲಿ ಸಿಪಿಎಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್‌ ಮಹಾನಿರ್ವಾಣ ಪ್ರಯುಕ್ತ ಮುಖಂಡರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿದರು
ಬಾಗೇಪಲ್ಲಿ ಸಿಪಿಎಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್‌ ಮಹಾನಿರ್ವಾಣ ಪ್ರಯುಕ್ತ ಮುಖಂಡರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿದರು   

ಬಾಗೇಪಲ್ಲಿ: ತಾಲ್ಲೂಕು ಸಿಪಿಎಂ ಕಚೇರಿಯಲ್ಲಿ ಶನಿವಾರ ಅಂಬೇಡ್ಕರ್‌ ಮಹಾಪರಿನಿರ್ವಾಣ ಪ್ರಯುಕ್ತ ಮುಖಂಡರು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಡಾ.ಬಿ.ಆರ್.ಅಂಬೇಡ್ಕರ್‌ ಆಸೆ, ಆಶಯ ಇಂದಿಗೂ ಆಳುವ ವರ್ಗದ ಅಧಿಕಾರಿಗಳು, ಜನಪ್ರತಿನಿಧಿಗಳು ಕಲ್ಪಿಸಿಲ್ಲ. ದೇಶದಲ್ಲಿ ಇಂದಿಗೂ ಬಡತನ, ಅಸಮಾನತೆ, ಜಾತೀಯತೆ, ಮತೀಯತೆ, ಧರ್ಮಾಂಧತೆ, ಅನಿಷ್ಟ ಪದ್ಧತಿಯ ಆಚರಣೆ ನಡೆಯುತ್ತಿವೆ ಎಂದರು.

ಮಹಿಳೆಯರ, ಮಕ್ಕಳ ಹಾಗೂ ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಆತ್ಯಾಚಾರ ಪ್ರಕರಣಗಳು ಆಗುತ್ತಿವೆ. ಸಂವಿಧಾನದ ಆಶಯಗಳು ಇಂದಿಗೂ ಈಡೇರಿಲ್ಲ. ಎಲ್ಲ ವರ್ಗದ ಜನರು ಸಮಾನತೆಯಿಂದ, ಸಹಬಾಳ್ವೆಯಿಂದ, ಸಹೋದರತೆಯಿಂದ ಇರಬೇಕು ಎಂಬುದೇ ಅಂಬೇಡ್ಕರ್‌ ಆಶಯ ಆಗಿತ್ತು. ಇಂದು ಮತೀಯ ಶಕ್ತಿಗಳು, ಕೋಮುವಾದಿಗಳು ಜಾತಿ, ಧರ್ಮಗಳ ನಡುವೆ ವಿಷಬೀಜ ಹಾಕಿ ಅಮಾಯಕ ಜನರನ್ನು ಬಲಿ ಪಡೆಯುತ್ತಿರುವುದು ದುರಂತ ಎಂದರು.

ADVERTISEMENT

ತಾಲ್ಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಕೇವಲ ಒಂದು ಜಾತಿಗೆ ಸೀಮಿತರಲ್ಲ. ಎಲ್ಲ ಜನರ ಆಶಾಕಿರಣ, ದಾರಿದೀಪ, ಶಕ್ತಿಯಾಗಿದ್ದಾರೆ. ಸಂವಿಧಾನವನ್ನೇ ಬದಲಾಯಿಸಬೇಕು ಎಂದು ಕೋಮುವಾದಿಗಳು ಹೇಳಿಕೆ ನೀಡುತ್ತಾರೆ. ದ್ವೇಷಭಾಷಣಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದರು.

ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಬಿಳ್ಳೂರುನಾಗರಾಜ್, ಅಶ್ವತ್ಥಪ್ಪ, ಜಿ.ಮುಸ್ತಾಫ, ಚನ್ನರಾಯಪ್ಪ, ಡಿ.ಟಿ.ಮುನಿಸ್ವಾಮಿ, ದೇವಿಕುಂಟೆ ಶ್ರೀನಿವಾಸ್, ಕೆ.ಮುನಿಯಪ್ಪ, ಸೋಮಶೇಖರ, ಬಿ.ಎಚ್.ರಫೀಕ್, ರಾಮಾಂಜಿ, ಚಂಚುರಾಯನಪಲ್ಲಿ ಕೃಷ್ಣಪ್ಪ, ಟೌನ್‍ಕೃಷ್ಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.