
ಗೌರಿಬಿದನೂರು: ನಗರದ ಪ್ರವಾಸಿ ಮಂದಿರದಲ್ಲಿ ಮದಕರಿ ಯುವ ಬ್ರಿಗೇಡ್ ವತಿಯಿಂದ ನವೆಂಬರ್ 2ರಂದು ಮದಕರಿ ಜಯಂತಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ಸಮುದಾಯದ ಮುಖಂಡ ಆರ್.ಅಶೋಕ್, ನಗರದ ವಾಲ್ಮೀಕಿ ವೃತ್ತದಿಂದ ಎಚ್.ಎನ್ ಕಲಾ ಭವನದವರೆಗೆ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮಕ್ಕೆ ಮಾಜಿ ಮಂತ್ರಿ ರಾಜುಗೌಡ ನರಸಿಂಹ ನಾಯಕ, ಅನಂತಪುರ ಸಂಸದ ಅಂಬಿಕಾ ಲಕ್ಷ್ಮಿನಾರಾಯಣ, ವಿಶೇಷ ಆಹ್ವಾನಿತರಾಗಿ ರವಿ ಡಿ.ಚನ್ನಣ್ಣನವರ್ ಆಗಮಿಸಲಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಂಗನಾಥ್ ಮಾತನಾಡಿ, ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಂತರ ಬೈಕ್ ರ‍್ಯಾಲಿ ಮಾಡಲಾಗುವುದು. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಎನ್.ಆರ್ ಮಾತನಾಡಿ, ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ನಾಡದೊರೆ ವೀರ ಮದಕರಿ ನಾಯಕ ಜಯಂತಿಯನ್ನು ಆಚರಣೆ ಮಾಡಲು ಮದಕರಿ ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ. ತಾಲ್ಲೂಕಿನಲ್ಲಿ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದು, ಎಲ್ಲರೂ ಭಾಗವಹಿಸಬೇಕು ಎಂದರು.
ಪೊಲೀಸ್ ಅಧಿಕಾರಿ ನಾಗರಾಜಪ್ಪ, ಕರೆ ತಿಮ್ಮಯ್ಯ, ಲೋಕೇಶ್, ನಿರಂಜನ್, ಪ್ರಶಾಂತ್, ನವೀನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.