
ನರಸಿಂಹರಾಜಪುರ: ಪ್ಲಾಂಟೇಷನ್ ಬೆಳೆಗಳ ಜಮೀನು ಗುತ್ತಿಗೆ ನೀಡಲು ಬೆಳೆಗಾರರು ಅರ್ಜಿಸಲ್ಲಿಸಲು ಸರ್ಕಾರ ದಿನಾಂಕ ವಿಸ್ತರಣೆ ಮಾಡಿದ್ದು, ಬೆಳೆಗಾರರು ಅವಕಾಶ ಬಳಸಿಕೊಳ್ಳಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದ್ದಾರೆ.
ಸರ್ಕಾರಿ ಜಮೀನುಗಳಲ್ಲಿ ಬೆಳೆಯುತ್ತಿರುವ ಪ್ಲಾಂಟೇಷನ್ ಬೆಳೆಗಳ ಜಮೀನುಗಳನ್ನು ಗುತ್ತಿಗೆ ನೀಡಲು ಸಂಬಂಧಪಟ್ಟ ಬೆಳೆಗಾರರಿಂದ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಲು 2024ರ ಮಾರ್ಚ್ 12ರಿಂದ ಮೂರು ತಿಂಗಳವರೆಗೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ 2024ರ ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿತ್ತು. ಅರ್ಜಿ ಸ್ವೀಕರಿಸಲು ಕಾಲಾವಕಾಶ ವಿಸ್ತರಿಸಲು ಸರ್ಕಾರಕ್ಕೆ ಮನವಿ ಬಂದಿದ್ದರಿಂದ 2025ರ ಜ.1ಕ್ಕಿಂತ ಮೊದಲು ಸರ್ಕಾರಿ ಜಮೀನಿನಲ್ಲಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯುತ್ತಿರುವ ಜಮೀನಿನ ಗುತ್ತಿಗೆ ನೀಡಲು ನಮೂನೆ 9ರಲ್ಲಿ ಸಂಬಂಧಪಟ್ಟ ಬೆಳೆಗಾರರಿಂದ ಆನ್ ಲೈನ್ ಮೂಲಕ ಅರ್ಜಿಸಲ್ಲಿಸಲು ಅನುಕೂಲವಾಗುವಂತೆ ದಿನಾಂಕ 2025ರ ಜುಲೈ 15ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.