
ಆಲ್ದೂರು: ಚಿಕ್ಕಮಗಳೂರಿನಲ್ಲಿ ಸೋಮವಾರ (ಜೂನ್ 9) ನಡೆಯುವ ರೈತ ಸಮಾವೇಶಕ್ಕೆ ಕರ್ನಾಟಕ ಬೆಳೆಗಾರರ ಒಕ್ಕೂಟದ ವತಿಯಿಂದ ಸಂಪೂರ್ಣ ಬೆಂಬಲವಿದೆ ಎಂದು ಸಂಘದ ನಿರ್ದೇಶಕ ಅಶೋಕ್ ಸೂರಪ್ಪನಹಳ್ಳಿ ತಿಳಿಸಿದ್ದಾರೆ.
ಬೆಳೆಗಾರರ ಸಮಸ್ಯೆಗಳಾದ ಫಾರಂ ನಂ. 50 ಮತ್ತು 53ರಲ್ಲಿ ಮಂಜೂರಾದ ಜಮೀನನ್ನು ರದ್ದುಪಡಿಸಿರುವುದು, ದಿಢೀರನೆ ಸೆಕ್ಷನ್ 4(1)ಅಡಿಯಲ್ಲಿ ಸೇರಿಸಿರುವುದು, ಶತಮಾನಗಳಿಂದ ಸಾಗುವಳಿ ಮಾಡಿಕೊಂಡು ಬಂದ ಭೂಮಿಯನ್ನು ಡಿಮ್ಡ್ ಫಾರೆಸ್ಟ್ ಹೆಸರಿನಲ್ಲಿ ದಾಖಲಿಸಿರುವುದು, ಮಾನವ–ವನ್ಯಜೀವಿ ಸಂಘರ್ಷದ ಸಮಸ್ಯೆಗೆ ಶಾಶ್ವತ ಪರಿಹಾರ, ಪ್ಲಾಂಟೇಷನ್ ಬಳೆಗಾರರ ಅನಧಿಕೃತ ಸಾಗುವಳಿಯನ್ನು ಲೀಫ್ ಮೂಲಕ ನೀಡಲು ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿಯ ಪರಿಹಾರಕ್ಕಾಗಿ ರೈತ ಸಮಾವೇಶ ಆಯೋಜಿಸಿದೆ. ಇದಕ್ಕೆ ನಮ್ಮ ಬೆಂಬಲವಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.