
ನರಸಿಂಹರಾಜಪುರ: ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ, ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದ ವ್ಯಾಪ್ತಿಯಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
ಪಟ್ಟಣದ ಅಂಬೇಡ್ಕರ್ ನಗರದ ಯುವಕರ ತಂಡ ಮುಖ್ಯರಸ್ತೆಯಲ್ಲಿ ನಾಸಿಕ್ ಡೋಲ್ ಬ್ಯಾಂಡ್‌ಗೆ ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿ, ಡೋಲ್‌ನ ನಾದಕ್ಕೆ ಕುಣಿಯುತ್ತಿದ್ದ ಯುವಕರು ಈ ಬಾರಿ ಕಪ್ ನಮ್ದೆ, ಆರ್‌ಸಿಬಿ, ಆರ್‌ಸಿಬಿ ಎಂದು ಕೂಗುವ ಧ್ವನಿ ಮುಗಿಲು ಮುಟ್ಟಿತ್ತು.
ಬಳಿಕ, ಪಟ್ಟಣದ ಬೇರೆ ಬೇರೆ ಭಾಗದಿಂದ ಅಂಬೇಡ್ಕರ್ ನಗರದತ್ತ ಬೈಕ್ ರ‍್ಯಾಲಿಗಳ ಮೂಲಕ ಬಂದ ಯುವಕರ ತಂಡ ಸಂಭ್ರಮಿಸಿದರು. ಕೆಲವು ಕಡೆ ಎಲ್‌ಇಡಿ ದೊಡ್ಡ ಪರದೆಯಲ್ಲಿ ಐಪಿಎಲ್ ಪಂದ್ಯ ವೀಕ್ಷಣೆಗೆ ಅನುವು ಮಾಡಿಕೊಡಲಾಗಿತ್ತು. ಸಂಜೆಯಿಂದಲೇ ಮಕ್ಕಳು, ಯುವಕರು ಆರ್‌ಸಿಬಿ ಜರ್ಸಿ ಧರಿಸಿ ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.