
ಹಿರಿಯೂರು: ತಾಲ್ಲೂಕಿನ ಹುಚ್ಚವ್ವನಹಳ್ಳಿಯಲ್ಲಿ ಮದ್ಯ ಅಕ್ರಮ ಮಾರಾಟದಿಂದ ಬಡವರು, ಕೂಲಿಕಾರರ ಕುಟುಂಬಗಳು ಬೀದಿಗೆ ಬಿದ್ದಿದ್ದು, ತಕ್ಷಣ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜೈ ಭೀಮ್ ಜೈ ದಲಿತ ಸ್ವಾಭಿಮಾನಿ ಸಮಿತಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಅಬಕಾರಿ ಅಧೀಕ್ಷಕ ಅಮಿತ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮನೆಯ ಹತ್ತಿರದಲ್ಲಿಯೇ ಇರುವ ಅಂಗಡಿಗಳಲ್ಲಿ ಮದ್ಯ ಸಿಗುತ್ತಿರುವ ಕಾರಣ ಬಡವರು ದಿನವೆಲ್ಲ ದುಡಿದ ಹಣವನ್ನು ಕುಡಿತಕ್ಕೆ ಸುರಿಯುತ್ತಿದ್ದಾರೆ. ಕುಡಿತದ ಕಾರಣಕ್ಕೆ ಕುಟುಂಬಗಳ ನೆಮ್ಮದಿ ಹಾಳಾಗಿದೆ. ತಕ್ಷಣ ಹಳ್ಳಿಗಳಲ್ಲಿ ಮದ್ಯ ಅಕ್ರಮವಾಗಿ ಮಾರಾಟ ಆಗುತ್ತಿರುವುದನ್ನು ನಿಲ್ಲಿಸದೇ ಹೋದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮಿತಿಯ ಜಿಲ್ಲಾಧ್ಯಕ್ಷ ಕಣುಮೇಶ್, ಸಂಘಟನಾ ಕಾರ್ಯದರ್ಶಿ ವಿಶ್ವನಾಥ್, ಮುಖಂಡರಾದ ಚಂದ್ರಶೇಖರ್, ಈರಣ್ಣ, ಎಚ್. ರವಿಶಂಕರ್, ಎಚ್.ಎನ್. ರಂಗಸ್ವಾಮಿ, ಅವಿನಾಶ್, ಮೋಹನ್, ನಾಗಣ್ಣ, ರುದ್ರಪ್ಪ, ಜೈರಾಮಪ್ಪ, ಸುನಿಲ್, ಪ್ರವೀಣ, ಕುಮಾರ್, ಯೋಗೇಶ್, ಶ್ರೀಧರ್, ಅಜಿತ್, ಲಕ್ಷ್ಮಕ್ಕ, ಕರಿಯಮ್ಮ, ಜಯಮ್ಮ, ಪುಷ್ಪಕ್ಕ, ಶಾಂತಮ್ಮ, ಗೀತಮ್ಮ, ಮಾರಕ್ಕ, ರಂಗಮ್ಮ, ರತ್ನಮ್ಮ, ರುದ್ರಮ್ಮ, ಭಾರತಮ್ಮ, ಆಶಮ್ಮ ಹಾಗೂ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.