
ಚಿತ್ರದುರ್ಗ: ಇಸ್ರೇಲ್ ಮತ್ತು ಇರಾನ್ ಯುದ್ಧದ ಭೀತಿಯ ನಡುವೆ ದೆಹಲಿಯಲ್ಲಿ ಬಂದಿಳಿದು ಊರಿಗೆ ಬರಲು ಹಣವಿಲ್ಲದೇ ಪರಿತಪಿಸುತ್ತಿದ್ದ ಎಂ.ಎ. ಜಬಿಉಲ್ಲಾ ಅವರನ್ನು ಶಾಸಕ ಕೆ.ಸಿ.ವೀರೇಂದ್ರ ಅವರು ಸಹಾಯಾಸ್ತ ನೀಡಿ ನಗರಕ್ಕೆ ಕರೆದು ತಂದಿದ್ದಾರೆ.
ಎಂ.ಎ. ಜಬಿಉಲ್ಲಾ ಇಸ್ರೇಲ್‌ನಲ್ಲಿ ಎಂಎಸ್ಸಿ (ಪರಿಸರ ಸೂಕ್ಷ್ಮ ಜೀವವಿಜ್ಞಾನ) ವಿದ್ಯಾಭ್ಯಾಸ ಮಾಡುತ್ತಿದ್ದರು. ಕಳೆದ ವಾರ ಯುದ್ಧ ತೀವ್ರಗೊಂಡಿದ್ದ ಕಾರಣ ಭಾರತ ಸರ್ಕಾರ ಅವರನ್ನು ಸುರಕ್ಷಿತವಾಗಿ ದೆಹಲಿಗೆ ಕರೆದು ತಂದಿತ್ತು. ದೆಹಲಿಯಿಂದ ಬೆಂಗಳೂರಿಗೆ ಬರಲು ಹಣವಿಲ್ಲದೇ ಸಂಕಷ್ಟದಲ್ಲಿ ಸಿಲುಕಿದ್ದರು.
‘ದೆಹಲಿಯ ಕರ್ನಾಟಕ ಭವನದಲ್ಲಿ ನನ್ನನ್ನು ಇರಿಸಲಾಗಿತ್ತು. ದೆಹಲಿಯಿಂದ ಬೆಂಗಳೂರಿಗೆ ಬರುವುದಕ್ಕೆ ಹಣ ನನ್ನ ಬಳಿ ಇರಲಿಲ್ಲ. ಕೆ.ಸಿ.ವೀರೇಂದ್ರ ಅವರನ್ನು ಸಂಪರ್ಕಿಸಿದಾಗ ಅವರು ಸಹಾಯ ಮಾಡಿದರು. ತಮ್ಮ ಸ್ವಂತ ಖರ್ಚಿನಲ್ಲೇ ದೆಹಲಿಯಿಂದ ಬೆಂಗಳೂರುವರೆಗೆ ವಿಮಾನದಲ್ಲಿ ಬರುವುದಕ್ಕೆ ವ್ಯವಸ್ಥೆ ಮಾಡಿದರು. ಜೊತೆಗೆ ಬೆಂಗಳೂರಿನಿಂದ ಚಿತ್ರದುರ್ಗಕ್ಕೂ ಬರಲು ಸಹಾಯ ಮಾಡಿದರು’ ಎಂದು ಜಬಿಉಲ್ಲಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.