
ಮಂಗಳೂರು: ಮಾಮ್ಸ್ ಆಫ್ ಮಂಗಳೂರು ಆಯೋಜಿಸಿದ್ದ ಸೂಪರ್ ಮಾಮ್ ಸೀಸನ್ –7ರ ಪ್ರಶಸ್ತಿಯನ್ನು ಅಮಿಕಾ ಲೋಬೊ ಗೆದ್ದುಕೊಂಡರು.
ರನ್ನರ್ ಅಪ್ ಆಗಿ ವಿಲ್ಮಾ ರೊಡ್ರಿಗ್ಸ್ ಮತ್ತು ಅಲ್ಕಾ ಮನೋಜ್ ಆಯ್ಕೆಯಾದರು. ಎಕ್ಸೋಟಿಕ್ ಪ್ರೊಫೆಷನಲ್ ಲೇಡೀಸ್ ಸಲೂನ್ ಮತ್ತು ಬಾನ್ ಮಸಾಲಾ ಆ್ಯಂಡ್ ಫುಡ್ ಪ್ರಾಡಕ್ಟ್ಸ್, ಇಎಲ್‌ಸಿ ಇಂಡಿಯಾ ಮತ್ತು ಸಿಎಫ್‌ಎಎಲ್ ಇಂಡಿಯಾ ಸಹಯೋಗದಲ್ಲಿ ನಡೆದ ಕಾರ್ಯಕ್ರಮವು ಅಮ್ಮಂದಿರ ಆತ್ಮವಿಶ್ವಾಸ, ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಯಿತು.
ತಾಯ್ತನದ ಹೆಮ್ಮೆಯಿಂದ ರ್‍ಯಾಂಪ್ ಮೇಲೆ ಸ್ಪರ್ಧಿಗಳು ಹೆಜ್ಜೆ ಹಾಕಿದರು. ಕೊನೆಯ ಸುತ್ತಿಗೆ 14 ಅಮ್ಮಂದಿರನ್ನು ಆಯ್ಕೆ ಮಾಡಿ, ಅಂತಿಮವಾಗಿ ಮೂವರ ಹೆಸರು ಘೋಷಣೆ ಮಾಡಲಾಯಿತು.
ಮರಿಯಂ ಮೊಹಿಯುದ್ದೀನ್, ಸಂಧ್ಯಾ ಕಾಮತ್ ನಿರ್ಣಾಯಕರಾಗಿದ್ದರು. ಸೌಮ್ಯಾ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.