
ಪುತ್ತೂರು: ತಾಲ್ಲೂಕಿನ ಕಬಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರ ಜಂಕ್ಷನ್ ಬಳಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಪಘಾತ ತಡೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಬಕ ಗ್ರಾಮ ಪಂಚಾಯಿತಿ ಹಾಗೂ ಸಾರ್ವಜನಿಕರು ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.
ಕಬಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ, ಸದಸ್ಯರಾದ ವಿನಯ ಕುಮಾರ್ ಕಲ್ಲೇಗ, ಶಾಬಾ ಕೆ., ಶಂಕರಿ ಜಿ.ಭಟ್, ಗ್ರಾಮಸ್ಥರಾದ ರಶೀದ್ ಮುರ, ಕೇಶವ, ಉಮೇಶ್ ಆಚಾರ್ಯ ಮೊದಲಾದವರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್‌ಕುಮಾರ್ ಭಂಡಾರಿ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.
ಮುರ ಜಂಕ್ಷನ್‌ನಿಂದ ಕೆದಿಲಸಂಪರ್ಕಿಲುಇದ್ದ ಹಿಂದಿನ ರಸ್ತೆಯನ್ನು ಬದಲಿಸಿ ಹೊಸದಾಗಿ ರೈಲ್ವೆ ಮೇಲ್ವೇತುವೆ ನಿರ್ಮಾಣಗೊಂಡಿದೆ. ಆ ರಸ್ತೆಯಲ್ಲಿ ವಾಹನ ಸಂಚಾರ ಪ್ರಾರಂಭಗೊಂಡ ಬಳಿಕ ನಿರಂತರವಾಗಿ ಮುರ ಜಂಕ್ಷನ್‌ನಲ್ಲಿ ಅಪಘಾತಗಳು ನಡೆಯುತ್ತಿವೆ. ಅವೈಜ್ಞಾನಿಕವಾಗಿ ನಿರ್ಮಾಣವಾದ ರೈಲ್ವೆ ಮೇಲ್ವೇತುವೆ ಹಾಗೂ ರಸ್ತೆಯ ಸಮೀಪದಲ್ಲೇ ರೈಲ್ವೇ ಇಲಾಖೆಗೆ ಸೇರಿದ ಜಾಗದಲ್ಲಿ ಮರಗಳಿರುವುದರಿಂದ ಅಪಘಾತಗಳು ಆಗುತ್ತಿವೆ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಮುರ ಜಂಕ್ಷನ್‌ನಲ್ಲಿ ನಿರಂತರವಾಗಿ ಅಪಫಾತ ನಡೆಯುತ್ತಿರುವ ಸಂಬಂಧಸಾರ್ವಜನಿಕರು ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ ಸಂಚಾರ ಠಾಣೆಯ ಪೊಲೀಸರು ಹಂಪ್‌ಗಳನ್ನು ನಿರ್ಮಾಣ ಮಾಡಿದ್ದರು. ಆದರೆ, ಅದನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ತೆರವುಗೊಳಿಸಿದ್ದಾರೆ. ರಸ್ತೆಯ ಎರಡೂಕಡೆ ಅನಧಿಕೃತವಾಗಿ ಹಣ್ಣು ಮಾರಾಟಮಾಡಲಾಗುತ್ತಿದೆ. ಅಲ್ಲಿಗೆ ಬರುವ ಗ್ರಾಹಕರ ವಾಹನ ನಿಲುಗಡೆ ಮಾಡುವ ಕಾರಣದಿಂದ ಮತ್ತಷ್ಟು ತೊಂದರೆಆಗುತ್ತಿದೆ. ಇದೊಂದು ಗಂಭೀರ ಸಮಸ್ಯೆಆಗಿರುವುದರಿಂದ ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಂಡು ಅಲ್ಲಿ ನಡೆಯುತ್ತಿರುವ ಅಪಫಾತ ತಪ್ಪಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.