
ಮಂಗಳೂರು: ಕರಾವಳಿಯು ಜೈನ, ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗಳ ಸಮನ್ವಯದ ಭೂಮಿ. ಇಲ್ಲಿ ಯಾವುದೇ ಧರ್ಮದ ಅಮಾಯಕರ ಮೇಲಿನ ದಾಳಿ ನಿಲ್ಲಲಿ. ಇಂತಹ ಘಟನೆಗಳು ಮರುಕಳಿಸದಿರಲಿ. ಧರ್ಮಗಳ ನಡುವೆ ಯಾವುದೇ ದ್ವೇಷ ಉಂಟುಮಾಡುವ ಹೇಳಿಕೆಗಳನ್ನು ಯಾರೂ ಕೊಡಬಾರದು ಎಂದು ಮೂಡುಬಿದಿರೆ ದಿಗಂಬರ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದ್ದಾರೆ.
ಡಿಜಿಟಲ್ ಮಾಧ್ಯಮದ ಮೂಲಕ ಮನ ನೋಯಿಸುವ, ದ್ವೇಷಪೂರಿತ ಹೇಳಿಕೆಗಳನ್ನು ನೀಡಬಾರದು. ವಿವಿಧ ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರು ಐಕ್ಯತೆಯಿಂದ ಸಾಮರಸ್ಯಕ್ಕೆ ಸಹಕಾರ ನೀಡಲಿ. ನಾವೆಲ್ಲರೂ ಭಾರತೀಯರು. ಸೌಹಾರ್ದಕ್ಕೆ ಭಂಗ ತರುವ ಕಿಡಿಗೇಡಿಗಳ ಕೃತ್ಯವನ್ನು ಬಲವಾಗಿ ಖಂಡಿಸಬೇಕಾಗಿದೆ. ಸಂವಿಧಾನ, ಸರ್ಕಾರ, ನ್ಯಾಯಾಂಗದಲ್ಲಿ ನಂಬಿಕೆ ಇಟ್ಟು, ಸುರಕ್ಷತೆ, ನಂಬಿಕೆ, ಐಕ್ಯತೆಗಾಗಿ ನಂಬಿದ ದೇವರಲ್ಲಿ ಪ್ರಾರ್ಥಿಸೋಣ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.